ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್: ಅನು ರಾಣಿಗೆ ಎಂಟನೇ ಸ್ಥಾನ

 ದೋಹಾ, ಅ 2 :   ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಮಹಿಳೆಯರ ಜಾವೆಲಿನ್ ಥ್ರೋ ವಿಭಾಗದ ಫೈನಲ್ನಲ್ಲಿ  ಭಾರತದ ಅನು ರಾಣಿ ಅವರು ಎಂಟನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ದೋಹಾದ ಖಲೀಫಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜಾವೆಲಿನ್ ಥ್ರೋ ವಿಭಾಗದ ಫೈನಲ್ನಲ್ಲಿ ಭಾಗವಹಿಸಿದ್ದ 12 ಮಂದಿಯಲ್ಲಿ ಅನು ರಾಣಿ ಎಂಟನೇ ಸ್ಥಾನ ಪಡೆದರು.

        ಅನು ರಾಣಿ ಅವರು ಮೊದಲನೇ ಥ್ರೋನಲ್ಲಿ 59.25 ಮೀ. ನಂತರದ ಐದು ಥ್ರೋಗಳಲ್ಲಿ 61.12 ಮೀ., 60.20 ಮೀ., 60.40 ಮೀ., 58.49.ಮೀ ಹಾಗೂ 57.93ಮೀ. ಎಸೆದಿದ್ದರು. ಆದರೂ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಆಸ್ಟ್ರೇಲಿಯಾದ ಕೆಲ್ಸೆ-ಲೀ ಬಾರ್ಬರ್ ಅವರು ಫೈನಲ್ ಎಸೆತದಲ್ಲಿ 66.56 ಮೀ ಎಸೆಯುವ ಮೂಲಕ ಚಿನ್ನದ ಮುಡಿಗೇರಿಸಿಕೊಂಡರು. ಚೀನಾದ ಶಿಯಿಂಗ್ ಲಿಯು ಹಾಗೂ ಹುಯಿಹುಯಿ ಲಿಯು ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತನ್ನದಾಗಿಸಿಕೊಂಡರು. 

         ಭಾರತದ ಪರ ಅನು ರಾಣಿ ಅವರು ಪದಕ ಗೆಲ್ಲುವಲ್ಲಿ ವಿಫಲವಾದರು. ಫೈನಲ್ ಮುಗಿಯುವವರೆಗೂ ಗಮನಾರ್ಹ ಪ್ರದರ್ಶನ ತೋರಿದರು.  2003ರಲ್ಲಿ ಲಾಂಗ್ ಜಂಪ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಅಂಜು ಬಾಬ್ಬಿ ಜಾಜರ್್ ಅವರ ಬಳಿಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆಲ್ಲುವ ಅನು ರಾಣಿ ಕನಸು ಭಗ್ನವಾಯಿತು.