ಪ್ಯಾರಿಸ್, ಏ 9,ಕೋವಿಡ್ -19 ತೀವ್ರಗೊಂಡಿರುವ ಹಿನ್ನೆಲೆಯಲ್ಲಿ 2021ಕ್ಕೆ ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಅನ್ನು 2022ರ ಜುಲೈ 15ರಿಂದ 24ಕ್ಕೆ ಮುಂದೂಡಿಕೆ ಮಾಡಲಾಗಿದೆ.ಒರೆಗಾನ್ ನಲ್ಲಿ 2021ರ ಆಗಸ್ಟ್ 6ರಿಂದ 15ರವರೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಿಗದಿಯಾಗಿತ್ತು. ಆದರೆ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ವೇಳಾಪಟ್ಟಿಯಿಂದ ಉಂಟಾಗುವ ತಾಕಲಾಟ ತಪ್ಪಿಸುವ ನಿಟ್ಟಿನಲ್ಲಿ ಚಾಂಪಿಯನ್ ಷಿಪನ್ನು ಮುಂದೂಡಲಾಗಿದೆ ಎಂದು ಆಡಳಿತ ಮಂಡಳಿ ಬುಧವಾರ ತಿಳಿಸಿದೆ.ಟೋಕಿಯೊ 2020ರ ಒಲಿಂಪಿಕ್ಸ್ ಕೂಟವನ್ನು ಮುಂದಿನ ವರ್ಷದ ಜುಲೈ 23ರಿಂದ ಆಗಸ್ಟ್ 8ರ ನಡೆಸಲಾಗುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಈಗಾಗಲೇ ಹೇಳಿದೆ.