ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ World AIDS Day celebration in Para Medical College
Lokadrshan Daily
12/22/24, 4:51 AM ಪ್ರಕಟಿಸಲಾಗಿದೆ
World AIDS Day celebration in Para Medical College
ತಾಳಿಕೋಟಿ 02: ಪಟ್ಟಣದ ಎಸ್.ವಿ.ಎಮ್. ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ವಿಜಯಪುರ, ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಎಸ್.ವಿ.ಎಂ. ಪ್ಯಾರಾ ಮೆಡಿಕಲ್ ಇನ್ಸಟ್ಯೂಟ್ ಇವರ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಐಸಿಟಿಸಿ ಸಮಾಲೋಚಕಿ ಕಲ್ಪನಾ ಹೂಗಾರ ಮಾತನಾಡಿ ಏಡ್ಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಎಚ್‌ಐವಿ ಸೋಂಕಿತರಿಗೆ ಮಾನವೀಯ ಬೆಂಬಲ ಸೂಚಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಡಿಸೆಂಬರ್ 01ರಂದು ವಿಶ್ವ ಏಡ್ಸ್ ದಿನವನ್ನಾಚರಿಸುತ್ತದೆ. ಏಡ್ಸ್ ಎಂಬ ಮಾರಕ ರೋಗವು ಇಂದು ಜಾಗತಿಕ ಮಟ್ಟದಲ್ಲಿ ಹರಡಿದೆ ಇದಕ್ಕೆ ಕಾರಣಗಳು ಹಲವಾರು ಇವೆ ಇದನ್ನು ಯುವ ಸಮುದಾಯ ಚೆನ್ನಾಗಿ ತಿಳಿದುಕೊಳ್ಳುವ ಅಗತ್ಯವಿದೆ, ವಿದ್ಯಾರ್ಥಿಗಳು ಸದಾ ಸಕಾರಾತ್ಮಕವಾಗಿ ಯೋಚಿಸಿ ಜೀವನದಲ್ಲಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವವ ರಾಗಬೇಕು.ನೀವು ತೆಗೆದುಕೊಳ್ಳುವ ಒಂದು ತಪ್ಪು ನಿರ್ಧಾರವು ನಿಮ್ಮ ಭವಿಷ್ಯವನ್ನೇ ನಾಶಮಾಡುತ್ತದೆ. ಎಚ್‌ಐವಿ ಸೋಂಕು ಮಾದಕ ವ್ಯಸನಿಗಳಲ್ಲಿ ಅತಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಒಂದು ವರದಿಯು ತಿಳಿಸುತ್ತದೆ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಮಾದಕ ವ್ಯಸನಿಗಳಾಗಬಾರದು, ಮೊಬೈಲ್ ನ ದುರ್ಬಳಕೆಯಿಂದಾಗಿ ಇಂತಹ ಗಂಭೀರ ಸಮಸ್ಯೆಗಳು ಹೆಚ್ಚುತ್ತಿವೆ, ಮೊಬೈಲ್ ಬಳಕೆ ಸಕಾರಾತ್ಮಕವಾಗಿರಲಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳುವುದರೊಂದಿಗೆ ಉತ್ತಮ ಸಂಸ್ಕಾರಗಳನ್ನೂ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಎ.ಆರಿ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ, ಶಿಕ್ಷಕ ವೃಂದ,ಐಸಿಟಿಸಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.