ಇಟ್ಟಿಗಿ : ದುರುಗಮ್ಮ ದೇವಿ ಜಾತ್ರೆಯ ಸಂಭ್ರಮ

ಇಟ್ಟಿಗಿ :  ದುರುಗಮ್ಮ ದೇವಿ ಜಾತ್ರೆಯ  ಸಂಭ್ರಮ Ittigi: Durugamma Devi Fair celebrations


ಲೋಕದರ್ಶನ ವರದಿ 

ಹೂವಿನಹಡಗಲಿ 12 :  ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಮೂರು ವರ್ಷ ಗಳ ಬಳಿಕ ದುರುಗಮ್ಮದೇವಿಯ  ಜಾತ್ರೋತ್ಸವ ಮಂಗಳವಾರ ಸಡಗರ ಸಂಭ್ರಮದಿಂದ ಜರುಗಿತು. ಸಂಪ್ರದಾಯ ಕ ಪೂಜೆ ನೆರವೇರಿಸಿದ ಬಳಿಕ ಬೆಳಗಿನ ಜಾವ   ದೇವಿ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಸಕಲ ವಾದ್ಯಗಳ  ಹಲಗೆ.ಡೊಳ್ಳ ಕುಣಿತ ಮೆರವಣಿಗೆ ಮೂಲಕ ಚೌಕಮನೆ ಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಬುಧವಾರ ಬೆಳಿಗ್ಗೆ ಮದ್ದು ಸುಡುವ ಮತ್ತು ಹಲಗೆ.ಡೊಳ್ಳು ಕುಣಿತ ಸೇರಿದಂತೆ ಜಾನಪದ ವಾದ್ಯ ಗಳು ಮೆರುಗು ನೀಡಿದವು. ದೇವಿಗೆ ಬೆಳ್ಳಿ ಆಭರಣಗಳಿಂದ ಅಲಂಕಾರ ಮಾಡಲಾಯಿತು. ವಿಶೇಷ ಪೂಜೆ ಬಳಿಕ ಮಳೆ.ಬೆಳೆ ಸಮ್ರದ್ದಿಗಾಗಿ ಪ್ರಾರ್ಥಿಸಿ ಗ್ರಾಮದ ಸುತ್ತಲೂ ಹುಲಸು ಚೆಲ್ಲಾಯಿತು. ಬೆಳಗಿನ ಜಾವದಲ್ಲಿ ಚೌಕ ಮನೆ ಕಟ್ಟೆಯಲ್ಲಿ    ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಹರಕೆ ತೀರಿಸಿದರು.  ಜಾತ್ರೋತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ  ದುರುಗಮ್ಮ ದೇವಿ ದೇವಸ್ಥಾನಕ್ಕೆ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು.ದೇವಿಯ ಹೆಸರಿನಲ್ಲಿಹೆಚ್ಚು ಕುರಿ ಮತ್ತು ಕೋಳಿಗಳ ಬಲಿ ನೀಡಲಾಯಿತು. ’ಗ್ರಾಮದಲ್ಲಿ ಎಲ್ಲಾ ಜನಾಂಗದವರು  ಕೋಮು ಸೌಹಾರ್ದತೆಯಿಂದ ಸಂಭ್ರಮದಿಂದ ಆಚರಿಸಿದರು. ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಎಂ. ನಿಂಗಪ್ಪ, ಉಪಾಧ್ಯಕ್ಷರಾದ ಹೆಚ್,ನಿಂಗಪ್ಪ,  ಕೆ. ಶೇಕ್ರ​‍್ಪ, ಸದಸ್ಯರುಗಳಾದ, ಗಡಿಗಿ ನಿಂಗಪ್ಪ. ವಿ. ಅಂಜಿನಪ್ಪ, ಬಿ. ದುರುಗಪ್ಪ, ಕೆ. ದಂಡಪ್ಪ, ಎ. ನಿಂಗಪ್ಪ, ಹಾಗೂ ಊರಿನ ದೈವಸ್ಥರು ಉಪಸ್ಥಿತರಿದ್ದರು.