ಅಳತೆಗೆ ತಕ್ಕ ಕೆಲಸ, ಕೆಲಸಕ್ಕೆ ತಕ್ಕ ಕೂಲಿ ಇದು ನಮ್ಮ ನರೇಗಾ : ಚಂದ್ರಶೇಖರ ಬಿ ಕಂದಕೂರ
ರೋಣ 17: ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ನರೇಗಾ ಯೋಜನೆಯು ಸಹಕಾರಿಯಾಗಿದ್ದು ಬಡವರ ಏಳಿಗೆಗಾಗಿ, ಕೂಲಿ ಕಾರ್ಮಿಕರನ್ನು ಗುರಿಯಾಗಿ ಇಟ್ಟುಕೊಂಡು ಈ ಯೋಜನೆ ಮಾಡಲಾಗಿದೆ. ಪ್ರಪಂಚದ ಯಾವುದೇ ದೇಶದಲ್ಲೂ ಇಂತಹ ಯೋಜನೆಯು ನಮಗೆ ನೊಡಲಿಕ್ಕೂ ಸಿಗುವದಿಲ್ಲಾ ಕೇಳಲು ಸಿಗುವುದಿಲ್ಲಾ ಅಂತಾ ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಕೂಲಿಕಾರ ರೊಂದಿಗೆ ಅಭಿಪ್ರಾಯ ಹಂಚಿಕೊಂಡರು..ತಾಲೂಕಿನ ಚಿಕ್ಕಮಣ್ಣೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2025-26 ನೇ ಸಾಲಿನ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ ಅವರು ಅಳತಕ್ಕೆ ತಕ್ಕ ಕೂಲಿ,ಕೂಲಿಗೆ ತಕ್ಕ ಹಣವನ್ನು ನರೇಗಾ ಯೋಜನೆಯಡಿ ನಿಮಗೆ ಸಿಗುತ್ತದೆ, “ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಒಂದು ವರದಾನ” ಗ್ರಾಮೀಣ ಪ್ರದೇಶದ ಕೂಲಿಕಾರರು ಕೆಲಸಕ್ಕಾಗಿ ಅಲೆದಾಡದೇ ತಮ್ಮ ಸ್ವಂತ ಗ್ರಾಮದಲ್ಲಿಯೇ ಬೇಡಿಕೆಯ ಪ್ರಕಾರ 100 ದಿನಗಳ ಖಾತ್ರಿ ಕೆಲಸವನ್ನು ಪಡೆಯಲು ಸಾಧ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿರಿಯ ನಾಗರಿಕರು, ವಿಧವೆಯರು, ವಿಶೇಷ ಚೇತನರಿಗೆ ನರೇಗಾ ದಡಿ ದುಡಿಯಲು ಹೆಚ್ಚಿನ ಆಧ್ಯತೆ, ಹಿರಿಯ ನಾಗರೀಕರು,ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ 50ಅ ರಿಯಾಯಿತಿ ಇದೆ ಇದನ್ನು ಋಅ ಚಟುವಟಿಕೆ ಮೂಲಕ ಪ್ರಚಾರ ಮಾಡಲಾಗಿದೆ ಎಂದರು.
ಈ ಬಾರಿ ಗರಿಷ್ಟ ಮಟ್ಟದ ಕೆಲಸವನ್ನು ನಿಮಗೆ ಕೊಡುತ್ತೇವೆ, ಮಳೆ ಬಿದ್ದು ಕೃಷಿ ಚಟುವಟಿಕೆ ಕೆಲಸ ಆರಂಭವಾಗುವ ವರೆಗೂ ನರೇಗಾ ಯೋಜನೆಯಡಿ ಕೆಲಸ ಕೊಡಲಾಗುವುದು ಪರಸ್ಥಳಕ್ಕೆ ಯಾರು ಗುಳೆ ಹೋಗದೇ ಬೇಸಿಗೆ ಅವಧಿಯಲ್ಲಿ ಇದ್ದೂರಲ್ಲೇ ಕೆಲಸ ಮಾಡಿ ಅಂತಾ ತಿಳಿಸಿದರು. ನರೇಗಾ ಸಮುದಾಯ ಕಾಮಗಾರಿಯಡಿ ಕೈಗೊಳ್ಳುತ್ತಿರುವ ಬದು ನಿರ್ಮಾಣದ ಅಳತೆ 10ಥ10ಥ2 ಇದೆ. ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ದಿನಕ್ಕೆ 370 ರೂಪಾಯಿ ನಿನಗೆ ವೈಯಕ್ತಿಕ ಖಾತೆಗೆ ಜಮಾವಣೆಯಾಗುತ್ತದೆ. ಜೊತೆಗೆ ಹಾಜರಾತಿಗೆ ದಿನವೊಂದಕ್ಕೆ ಎರಡು ಪೋಟೋಗಳನ್ನು ತಗೆಯಲಾಗುವುದು. ಎರಡು ಪೋಟೋಗಳಲ್ಲಿ ಕೂಲಿ ಕಾರ್ಮಿಕರು ಇದ್ದರೆ ಮಾತ್ರ ದಿನದ ಕೂಲಿಮೊತ್ತ ನಿಮ್ಮ ಖಾತೆಗೆ ಜಮಾವಣೆ ಯಾಗುತ್ತದೆ ಎಂದು ಹೇಳಿದರುಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಶೀದ ಹುಣಸಿಮರದ,ಆಇಓ, ಃಈಖಿ, ನರೇಗಾ ಸಿಬ್ಬಂದಿಗಳು ಹಾಗೂ ತಾಲೂಕ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.