ಲೋಕದರ್ಶನ ವರದಿ
ಯಲ್ಲಾಪುರ 30: ಮಹಿಳೆಯರು ತಮ್ಮ ಕಾರ್ಯದ ಜೊತೆಗೆ ಪರಿಸರ ರಕ್ಷಿಸುವ ಕಾರ್ಯದಲ್ಲೂ ತೊಡಗಿ ವಿನಾಶದ ಅಂಚಿನಲ್ಲಿರುವ ಅನೇಕ ಹೂ-ಗಿಡಗಳನ್ನು ಸಂರಕ್ಷಿಸುವ ಮೂಲಕ ಪ್ರತಿಯೊಬ್ಬರ ಮನೆಯಂಗಳದಲ್ಲಿ ಸುಂದರವಾದ ಆರೋಗ್ಯಪೂರ್ಣ ವಾತಾವರಣ ನಿರ್ಮಾಣ ಮಾಡಲು ಮುಂದಾಗಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಸಮನ್ವಯಾಧಿಕಾರಿ ವಿಜಯಾ ಹೆಗಡೆ ಹೇಳಿದರು.
ಅವರು ಶನಿವಾರ ಪಟ್ಟಣದ ಎ.ಪಿ.ಎಂ.ಸಿ.ಯ ಶ್ರೀಮಾತಾ ಟ್ರೇಡಿಂಗ್ ಕಂಪನಿಯ ಆವಾರದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ ಹಾಗೂ ಮಾತೃ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡ `ಹೂ ಗಿಡ', ತಿಂಡಿ-ತಿನಿಸುಗಳ ಮಾರಾಟ ಮತ್ತು ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಘಟ್ಟದ ಮೇಲಿನ ಪ್ರದೇಶದಲ್ಲಿ ಉತ್ತಮ ಪರಿಸರವಿದೆ. ಮಹಿಳೆಯರಿಗೆ ತಮ್ಮ-ತಮ್ಮ ಮನೆಯ ಸುತ್ತಮುತ್ತಲೂ ಸುಂದರ ಪರಿಸರ ವಾತಾವರಣವನ್ನು ನಿಮರ್ಿಸುವುದಕ್ಕೆ ಇಂತಹ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಿದೆ. ತನ್ಮೂಲಕ ಮಹಿಳೆಯರ ಕ್ರಿಯಾಶೀಲತೆಗೆ ಇಂತಹ ಚಟುವಟಿಕೆಗಳು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾತೃಮಂಡಳಿ ಅಧ್ಯಕ್ಷೆ ಮುಕ್ತಾ ಶಂಕರ ಮಾತನಾಡಿ, ರಾಸಾಯನಿಕ ಗೊಬ್ಬರ ಹಾಕಿ ಬೆಳೆಸಿದ ಹೂಗಿಡಗಳಿಗಿಂತಲೂ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಸಿದ ಇಂತಹ ಗಿಡಗಳು ಹೆಚ್ಚು ಸಮೃದ್ಧವಾಗಿ ಬೆಳೆಯಲು ಸಾಧ್ಯ. ನಮ್ಮ ಒಕ್ಕೂಟ ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಮಾಜದಲ್ಲಿ ಮಹಿಳೆಯರು ಹೆಚ್ಚು ತೊಡಗಿಕೊಳ್ಳುವಂತೆ ಪ್ರೋತ್ಸಾಹದ ಅಗತ್ಯತೆ ಇದೆ. ಸಾರ್ವಜನಿಕರು ಇಂತಹ ಗಿಡ, ಮನೆಯಲ್ಲೇ ಸಿದ್ಧಪಡಿಸಿದ ಸಂಡಿಗೆ, ಹಪ್ಪಳ, ತಿಂಡಿ-ತಿನಿಸುಗಳನ್ನು ಖರೀದಿಸುವ ಮೂಲಕ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಇನ್ನೂ ಹೆಚ್ಚಿನ ಇಂತಹ ಕಾರ್ಯಕ್ರಮಗಳು ನಡೆಸುವ ಸಂಘಟನೆ ಬೆಳೆಸುವ ಕಾರ್ಯಕ್ಕೆ ಸಹಕರಿಸಿದಂತಾಗುತ್ತದೆ ಎಂದರು.
ವೇದಿಕೆಯಲ್ಲಿ ಮಾತೃಮಂಡಳಿ ಪ್ರಮುಖರಾದ ಮಾದೇವಿ ಭಟ್ಟ, ರಮಾ ದೀಕ್ಷಿತ್, ಸಂಧ್ಯಾ ಕೊಂಡದಕುಳಿ, ಡಾ| ಸುಚೇತಾ ಮದ್ಗುಣಿ ಉಪಸ್ಥಿತರಿದ್ದರು.
ಮಾತೆಯರಿಂದ ಭಗವದ್ಗೀತೆ, ಪ್ರಾರ್ಥನಾ ಶ್ಲೋಕದ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮ
ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಾಹ್ನವಿ ಮಣ್ಮನೆ ಸ್ವಾಗತಿಸಿದರು, ನಿದರ್ೇಶಕಿ ಅನಿತಾ ಭಟ್ಟ ನಿರೂಪಿಸಿದರು, ಕಾರ್ಯದಶರ್ಿ ಗಾಯತ್ರಿ ಬೋಳಗುಡ್ಡೆ ವಂದಿಸಿದರು,
ಮೇಳದಲ್ಲಿ ವಿವಿಧ ನಮೂನೆಯ ಹೂ ಗಿಡಗಳು, ಔಷಧಿ ಗಿಡಗಳು, ಗ್ರಾಮೀಣ ಮಹಿಳೆಯರು ತಯಾರಿಸಿದ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕಿಡಲಾಗಿತ್ತು. ಭಾನುವಾರವು ಕೂಡ ಮೇಳ ನಡೆಯಲಿದೆ. ಅನಿತಾ ಹೆಗಡೆ ನಿರ್ವಹಿಸಿದರು. ಗಾಯತ್ರಿ ಬೋಳಗುಡ್ಡೆ ವಂದಿಸಿದರು.