ಶಿಗ್ಗಾವಿ 11 : ಡಾ. ಹೇಮಾವತಿ ಹೆಗ್ಗಡೆಯವರ ಕನಸಿನ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಮಹಿಳಾ ಸಬಲೀಕರಣ ಮಹತ್ವಾಕಾಂಕ್ಷೆ ಹೊಂದಿದ ಕಾರ್ಯಕ್ರಮ ಎಂದು ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಹೇಳಿದರು.
ತಾಲೂಕಿನ ಅರಟಾಳದಲ್ಲಿ ನಡೆದ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ದಡಿಯಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ದುರ್ಬಲ ವರ್ಗದ ಮಹಿಳೆಯರಲ್ಲಿ ಕುಟುಂಬ ನಿರ್ವಹಣೆ ಜಾಣ್ಮೆ, ಹಣಕಾಸಿನ ವ್ಯವಹಾರದ ಜ್ಞಾನ, ಮಕ್ಕಳ ಶಿಕ್ಷಣ, ಪೌಷ್ಠಿಕ ಆಹಾರ ಮತ್ತು ವೈಯಕ್ತಿಕ ಪರಿಸರ ಪ್ರಜ್ಞೆ, ಸ್ವಾವಲಂಬನೆ, ಸ್ವಉದ್ಯೋಗ, ಸರ್ಕಾರದ ಸೌಲಭ್ಯಗಳ ಬಳಕೆ, ನಾಗರಿಕ ಸೌಲಭ್ಯಗಳ ಬಳಕೆ, ಮುಂತಾದ ಗುರಿಗಳನ್ನು ಇಟ್ಟುಕೊಂಡು ಯೋಜನೆ ಇಂದು ರಾಜ್ಯಾದ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಮಾತನಾಡಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣ, ಮಹಿಳೆಯರಲ್ಲಿ ಸ್ವಉದ್ಯೋಗ ಮತ್ತು ಉದ್ಯಮಿಶೀಲತೆ ಬೆಳೆಸುವ ಮೂಲಕ ಸ್ವಾವಲಂಬಿಯಾಗಿ ಬದುಕಲು ಕಾರಣೀಭೂತವಾಗಿದೆ ಎಂದರು.
ಜ್ಞಾನ ವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಮಾತೋಶ್ರೀ ಡಾ. ಹೇಮಾವತಿ ಹೆಗ್ಗಡೆ ಮತ್ತು ಶ್ರದ್ಧಾ ಅಮಿತ್ ಮಾರ್ಗದರ್ಶನದಲ್ಲಿ ಜ್ಞಾನ ವಿಕಾಸ ಯೌಟ್ಯೂಬ್ ಚಾನೆಲ್ ಮೂಲಕ ಪ್ರತಿ ವಾರ ಗ್ರಾಮೀಣ ಮಹಿಳೆಯರಿಗಾಗಿ ಅವರ ಜ್ಞಾನಭಿವೃದ್ಧಿಗಾಗಿ ಸರ್ಕಾರಿ ಸೌಲಭ್ಯಗಳು ಆರೋಗ್ಯ ನೈರ್ಮಲ್ಯಗಳ ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಗೌರವ ಉಪಸ್ಥಿತಿ ಭಗವಾನ್ 1008 ಪಾಶ್ವನಾಥ ದಿಗಂಬರ ಜೈನಬಸದಿ ಅರಟಾಳ, ಜಿಲಾ ಜನ ಜಾಗೃತಿ ವೇದಿಕೆ ಸದಸ್ಯ ಪ್ರಕಾಶ್ ಪಾಸಾರ, ಈರಣ್ಣ ಚೌಟಿ, ಯೋಜನಾಧಿಕಾರಿ ಉಮಾ, ಜ್ಞಾನ ವಿಕಾಸ ಅಧಿಕಾರಿ ಕುಮಾರಿ ರಾಧಿಕಾ, ಜಯರಾಮ, ಆನಂದ, ಪ್ರಶಾಂತ ಜ್ಞಾನವಿಕಾಸ ಕೇಂದ್ರದ ತಾಲೂಕಿನ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿರಿದ್ದರು.