ಮಹಿಳಾ ವಿಭಾಗದ ಕಬಡ್ಡಿ ಪಂದ್ಯ

ಲೋಕದರ್ಶನ ವರದಿ

ಚನ್ನಮ್ಮನ ಕಿತ್ತೂರು:  ಇಲ್ಲಿಯ ಕಿನಾವಿವ ಸಂಘದ ಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯಿಂದ ಆಯೋಜಿಸಲಾಗಿದ್ದ ಮಹಿಳಾ ವಿಭಾಗದ ಕಬಡ್ಡಿ ಪಂದ್ಯ ನೋಡುಗರ ಗಮನ ಸೇಳೆಯಿತು.

ಮಹಿಳಾ ವಿಭಾಗದ ಕಬಡ್ಡಿ ಪಂದ್ಯದಲ್ಲಿ ಒಟ್ಟು 18 ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿ ರೋಚಕತೆಯಿಂದ ಕೂಡುತ್ತಿದ್ದಂತೆ ವರುಣ ಅಬ್ಬರಿಸಿದ ಪರಿಣಾಮ ಕೆಲ ಕಾಲ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಯಿತು ನಂತರ ಮತ್ತೆ ಆರಂಭವಾದ ಪಂದ್ಯಾವಳಿಯೂ ರೋಚಕತೆಯಿಂದ ಕೂಡಿತು ನಂತರ ಅಂತಿಮ ಹಂತದಲ್ಲಿ ರಾಯಬಾಗದ ಬಿರಡಿ ತಂಡವು ಪ್ರಥಮ ಸ್ಥಾನ ಪಡೆದು ಗೆಲುವಿನ ನಗೆ ಬೀರಿದರೆ ದ್ವೀತಿಯ ಸ್ಥಾನಕ್ಕೆ ನರಗುಂದದ ಶ್ರೀಶಕ್ತಿ ಸ್ಪೋಟ್ಸ ತಂಡವು ಸಮಾಧಾನಪಟ್ಟುಕೊಂಡಿತು.

ಪ್ರಥಮ ಬಹುಮಾನ ರೂ . 10 ಸಾವಿರ ಹಾಗೂ ದ್ವೀತಿಯ ಸ್ಥಾನಕ್ಕೆ ರೂ. 6 ಸಾವಿರ ಚೆಕ್ಕ ಜಿಲ್ಲಾಡಳಿತದಿಂದ ನೀಡುವ ಮೂಲಕ ಸ್ಪದರ್ಾಳುಗಳನ್ನು ಹುರುದುಂಬಿಸಲಾಯಿತು. 

ಸ್ಥಳೀಯ ಕಿನಾವಿವ ಸಂಘದ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ವಾಲಿಬಾಲ್ ಪುರುಷ ವಿಭಾಗದಲ್ಲಿ ಒಟ್ಟು 30 ತಂಡ ಹಾಗೂ ಮಹಿಳಾ ವಿಭಾಗದಲ್ಲಿ 6 ತಂಡಗಳು ಭಾಗವಹಿಸಿದ್ದವು. ಪುರುಷ ವಿಭಾಗದಲ್ಲಿ ಬೆಳಗಾವಿಯ ಡಿ.ವಾಯ್.ಎಸ್.ಎಸ್.ಓತಂಡ ಪ್ರಥಮ ಸ್ಥಾನಗಳಿಸಿ ರೂ. 10 ಸಾವಿರ ಬಹುಮಾನಕ್ಕೆ ಭಾಜನರಾದರೆ, ಕಿತ್ತೂರು ತಾಲೂಕಿನ ನೇಗೀನಹಾಳ ಗ್ರಾಮದ ತಂಡ ರೂ.6 ಸಾವಿರ ಬಹುಮಾನ ಪಡೆದು ದ್ವೀತಿಯ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿತು.

ಮಹಿಳಾ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದ ಸಕರ್ಾರಿ ಪ್ರೌಡಶಾಲೆಯು ಪ್ರಥಮ ಸ್ಥಾನ ಪಡೆದು ರೂ.10 ಸಾವಿರ ಬಹುಮಾನ ಗೆದ್ದರೆ, ಖಾನಾಪೂರ ತಾಲೂಕಿನ ಮಂಗ್ಯಾನಕೊಪ್ಪ ಗ್ರಾಮದ ತಂಡವು ರೂ.6 ಸಾವಿರ ಪಡೆಯುವ ಮೂಲಕ ದ್ವೀತಿಯ ಸ್ಥಾನ ಗಳಿಸಿತು.