ತ್ಯಾಗಕ್ಕೆ ಮತ್ತೊಂದು ಹೆಸರೇ ಸ್ತ್ರೀ ಹಿ ಡಾ. ಸತ್ಯಾನಂದ ಪಾತ್ರೋಟ

Woman is another name for sacrifice: Dr. Satyananda Patrota

ಹೊಸಪೇಟೆ 09: ವೀರಶೈವ ವಿದ್ಯಾವರ್ಧಕ ಸಂಘದ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯವು ದಿ. 8ರಂದು “ಪಿಡಿಐಟಿ ಪರಿವಾರ ಮಿಲನ ಹಾಗೂ ಮಹಿಳಾ ದಿನಾಚರಣೆ” ಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.   

ತ್ಯಾಗಕ್ಕೆ ಮತ್ತೊಂದು ಹೆಸರೇ ಸ್ತ್ರೀ, ಅವಳು ತಾಯಿಯಾಗಿ, ಹೆಂಡತಿಯಾಗಿ, ಅಕ್ಕ ತಂಗಿಯಾಗಿ, ಮನೆಯ ಹಲವಾರು ಪಾತ್ರದಲ್ಲಿ ಜವಾಬ್ದಾರಿಯನ್ನು  ಹೊರೆತು ಸಮಾಜದಲ್ಲೂ ಉನ್ನತ ಸ್ಥಾನವನ್ನು ಅಲಂಕರಿಸಿ ದಶಾವತಾರಕ್ಕೂ ಹೆಚ್ಚು ಬಗೆಯ ರೂಪದಲ್ಲಿ ತನ್ನ ಪರಿವಾರದ ಉನ್ನತಿಗೆ ಕಾರ್ಯನಿರ್ವಹಿಸುತ್ತಾಳೆ ಇಂತಹ ತಾಯಿಯ ಋಣವನ್ನು ತೀರಿಸಲು ಅಸಾಧ್ಯ ಎಂದು ಬಾಗಲಕೋಟೆಯ ಜನಮನ ಕವಿ ಹಾಗೂ ಲೇಖಕರಾದ ಡಾ.ಸತ್ಯಾನಂದ ಪಾತ್ರೋಟ ಅಭಿಪ್ರಾಯಪಟ್ಟರು.     

ಹಲವಾರು ವೇಷ, ಭಾಷೆ, ಸಂಸ್ಕೃತಿಗಳಲ್ಲಿ ಏಕತೆ ಹೊಂದಿದ ಬಹುತ್ವ ಭಾರತದ ಪರಿಕಲ್ಪನೆಯಿಂದ ಅಂತರಂಗದ ಸೌಂದರ್ಯವನ್ನು ಬೆಳೆಸಿಕೊಳ್ಳಬೇಕು. ಕಾಯಕ, ಪ್ರಸಾದ, ಅಕ್ಷರ ದಾಸೋಹ ನೀಡುವ ಪ್ರಾಧ್ಯಾಪಕ ವೃತ್ತಿ ಮಹೋನ್ನತವಾದದ್ದು ಅಂತಹ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿವರ್ಗದವರ ಸೇವೆಯನ್ನು ಗುರುತಿಸಿ ಈ ಸಂಧರ್ಭದಲ್ಲಿ  ಸನ್ಮಾನಿಸಿರುವುದು ಈ ಸಂಸ್ಥೆಯ ಹೆಗ್ಗಳಿಕೆ ಎಂದು ಹೇಳಿದರು.   

ಹೆಣ್ಣು ವಿಶೇಷತೆಯ ಹಾಗೂ ಗಂಡು ಸಾಮರ್ಥ್ಯದ ಸ್ವರೂಪ -   ಸ್ವಾಮಿ ಪ್ರಭೋದಾಮಯಿ  

ಹಂಸಾಬ ಶಾರದಾಂಬ ಆಶ್ರಮದ ಸ್ವಾಮೀಜಿ ಆದ ಸ್ವಾಮಿ ಪ್ರಭೋದಾಮಯಿ ಮಾತನಾಡಿ ಹೆಣ್ಣು ವಿಶೇಷತೆಯ ಹಾಗೂ ಗಂಡು ಸಾಮರ್ಥ್ಯದ ಸ್ವರೂಪ, ಇಂತಹ ಸೃಷ್ಟಿಯಲ್ಲಿ  ಗಂಡು ಹೆಣ್ಣು ತನ್ನ ಜವಾಬ್ದಾರಿಯನ್ನು ಅರೆತು ಸದ್ವಿಚಾರ, ಸತ್ ಚಿಂತನೆ, ಸದ್ಭಾವನೆ ಸತ್ಕಾರ್ಯಗಳಿಂದ ಮುನ್ನಡೆದರೆ ಬದುಕು ಬೆಳಕಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.    

ಪಿ.ಡಿ.ಐ.ಟಿ.ಯ ಆಡಳಿತ ಮಂಡಳಿ ಅಧ್ಯಕ್ಷರಾದ ಕರಿಬಸವರಾಜ ಬಾದಾಮಿ ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿವರ್ಗದವರಿಗೆ ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಿ ಮಾತನಾಡಿದರು.   

ಸಂಗೀತ ವಿದ್ವಾನ್ ವೀರ​‍್ಪ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು.   

ಪಿ.ಡಿ.ಐ.ಟಿ.ಯ ಆಡಳಿತ ಮಂಡಳಿಯ ಸದಸ್ಯರಾದ ಸಂಗನಬಸಪ್ಪ, ಗುರುಬಸವರಾಜ, ಚಂದ್ರಮೌಳಿ ಹಾಗೂ ಅನಿಲ್ ಜವಳಿ, ಪ್ರಾಂಶುಪಾಲರಾದ ಡಾ.ಯು.ಎಂ.ರೋಹಿತ್, ಉಪ ಪ್ರಾಂಶುಪಾಲರಾದ ಡಾ. ಪಾರ್ವತಿ ಕಡ್ಲಿ, ಐಕ್ಯೂಎಸಿಯ ಸಂಚಾಲಕರಾದ ಡಾ.ಶಿವಕೇಶವ್ ಕುಮಾರ್, ಡೀನ್ ಡಾ.ಮಂಜುಳಾ ಎಸ್‌.ಡಿ, ಮಹಿಳಾ ಸಬಲಿಕರಣ ಕೋಶದ ಸಂಚಾಲಕರಾದ ಡಾ.ಶರಣಬಸಮ್ಮ, ವಿವಿಧ ವಿಭಾಗದ ಮುಖ್ಯಸ್ಥರು ಕಾಲೇಜಿನ ಎಲ್ಲಾ ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿವರ್ಗದವರು ಹಾಗೂ ಅವರ ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರೊ. ರವಿಕುಮಾರ್ ಪ್ರಾರ್ಥಿಸಿದರು, ಇಂದಿರಾ ಸ್ವಾಗತಿಸಿದರು, ವೀಣಾ ವಂದಿಸಿದರು, ಉಷಾ ಗುಜ್ಜಲ್ ನಿರೂಪಿಸಿದರು.