ರಾಂಚಿ, ನ.8: ಜಾರ್ಖಂಡ್ನ ಗಿರಿಧಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಹಸಿವಿನಿಂದ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಆಕೆ ಹಸಿವಿನಿಂದ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದವರು ಹೇಳಿದರೆ, ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಸರಯು ರಾಯ್ ಇದನ್ನು ತಳ್ಳಿ ಹಾಕಿದ್ದಾರೆ. ಹಸಿವಿನಿಂದ ಸಾವನ್ನಪ್ಪಿರುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಹಸಿವಿನಿಂದ ಸಾವನ್ನಪ್ಪುವುದನ್ನು ತಡೆಗಟ್ಟಲು ರಾಜ್ಯದಲ್ಲಿ ಅನ್ನಪೂರ್ಣ ಸೇರಿದಂತೆ ಹಲವು ಯೋಜನೆಗಳಿಗೆ ಎಂದು ಸಚಿವರು ಹೇಳಿದರು. ಗಿರಿಧಿ ಜಿಲ್ಲೆಯ ಚಿರುದಿಹ್ನ ರಮೇಶ್ ತುರಿ ಅವರು, ತಮ್ಮ 48 ವರ್ಷದ ಪತ್ನಿ ಸಾವಿತ್ರಿ ಕಳೆದ ಮಂಗಳವಾರ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಅನ್ನಪೂರ್ಣ ಯೋಜನೆಯಡಿ ಅಗತ್ಯವಿರುವವರಿಗೆ ಪಡಿತರ ಚೀಟಿ ನೀಡಲು ಪರಿಪೂರ್ಣ ವ್ಯವಸ್ಥೆ ಇದೆ, ಅವರಿಗೆ ಪಡಿತರ ಚೀಟಿ ಇಲ್ಲದಿದ್ದರೂ, ಧಾನ್ಯ ಬ್ಯಾಂಕುಗಳಿವೆ ಮತ್ತು ಮುಖಿಯಾಗಳಿಗೆ 10,000 ನೀಡಲಾಗುತ್ತದೆ, ಅವರನ್ನು ಸಹಾಯಕ್ಕಾಗಿ ಸಂಪರ್ಕಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.