ಕಾಯಂ ಅಭಿಯಂತರರಿಲ್ಲದೆ ಮಹಾಲಿಂಗಪುರ ಪಟ್ಟಣದ ಅಭಿವೃದ್ಧಿಗೆ ಅಡಚಣೆ
Without permanent engineers, the development of Mahalingapur town is hampered
ಮಹಾಲಿಂಗಪುರ: ಹಲವಾರು ತಿಂಗಳುಗಳಿಂದ ಪುರಸಭೆಗೆ ಕಾಯಂ ಕಿರಿಯ ಅಭಿಯಂತರರ ನೇಮಕವಿಲ್ಲದೆ ಜನ ಸಾಮಾನ್ಯರಿಗೆ ಮತ್ತು ಪಟ್ಟಣದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿದ್ದು, ಇದನ್ನು ಶೀಘ್ರ ಸರಿಪಡಿಸಲು ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರನ್ನು ಬಾಗಲಕೋಟ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ ಆಗ್ರಹಿಸಿದ್ದಾರೆ.
ಮಹಾಲಿಂಗಪುರ ಪಟ್ಟಣ ಚಿಕ್ಕ ಹಳ್ಳಿ ಅಲ್ಲ, ಜಿಲ್ಲೆಯಲ್ಲಿಯೇ ಬೃಹತ್ ಆಗಿ ಬೆಳೆದು ನಿಂತ ಪಟ್ಟಣವಾಗಿದೆ. ಯಾವುದೇ ಗ್ರಾಮ, ಪಟ್ಟಣಗಳು ಅಭಿವೃದ್ಧಿ ಹೊಂದ ಬೇಕಾದರೆ ಪೂರಕ ಎಂಬಂತೆ ಅಭಿಯಂತರರ ಪಾತ್ರ ಪ್ರಾಮುಖ್ಯತೆಯನ್ನು ಪಡೆದುಕ್ಕೊಳ್ಳುತ್ತದೆ.
ಇವರಿಲ್ಲದೆ ಹೋದರೆ ಪಟ್ಟಣದ ಅಂದ ಚೆಂದ ಅಷ್ಟೇ ಅಲ್ಲ, ಒಟ್ಟಾರೆ ಅಭಿವೃದ್ಧಿಯೇ ಶೂನ್ಯ,ಇದು ಎಲ್ಲರಿಗೂ ತಿಳಿದ ವಿಷಯವೆ ಸರಿ.ಇಷ್ಟಾದರೂ ಹಲವಾರು ತಿಂಗಳುಗಳಿಂದ ಮಹಾಲಿಂಗಪುರ ಪುರಸಭೆಗೆ ಕಾಯಂ ಕಿರಿಯ ಅಭಿಯಂತರರಿಲ್ಲದ್ದು ಸೋಜಿಗದ ಸಂಗತಿಯೇ ಸರಿ.ಹಾಗೆನಾದರೂ ಪಟ್ಟಣದ 23 ವಾರ್ಡ್ ಗಳಲ್ಲಿಯೂ ಸಂಚರಿಸಿ ನೋಡಿದರೆ ರಸ್ತೆ,ಚರಂಡಿಗಳು ಹದಗೆಟ್ಟು ಹೋಗಿವೆ. ಕುಡಿಯುವ ನೀರು ಪೂರೈಕೆಯಲ್ಲಿ ಲೋಪಗಳು ಎದ್ದು ಕಾಣುತ್ತಿವೆ.
ಈ ಮುಂಚೆ ಉಸ್ತುವಾರಿ ಸಚಿವರಾದ ತಿಮ್ಮಾಪುರ ಅವರು ಸದರಿ ವಿಷಯದ ಕುರಿತ ಮನವಿಗೆ ಸ್ಪಂದಿಸಿ ಡೆಪಟೇಷನ್ (ನಿಯೋಜನೆ ಆಧಾರ) ಮೇಲೆ ವಾರದಲ್ಲಿ 3 ದಿವಸ ಪುರಸಭೆಯ ಕೆಲಸ ಕಾರ್ಯಗಳಿಗೆ ಕಿರಿಯ ಅಭಿಯಂತರರನ್ನು ನೇಮಿಸಿದ್ದರು. ಇದರ ಪ್ರಯುಕ್ತ ಪೂರ್ಣ ಪ್ರಮಾಣ ಅಲ್ಲದೆ ಇದ್ದರೂ ಹೆಚ್ಚು ಕಡಿಮೆ ಕೆಲಸ ಕಾರ್ಯಗಳು ನಡೆದಿವೆ.
ಈ ಕ್ರಮದಿಂದಲೂ ಜನಸಾಮಾನ್ಯರು ತೃಪ್ತರಾಗಿಲ್ಲ. ಏನೆ ಆಗಲಿ ದೊಡ್ಡ ಪ್ರಮಾಣದಲ್ಲಿ ಬೆಳೆದಿರುವ ಮಹಾಲಿಂಗಪುರ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದಲಾದರೂ, ಶೀಘ್ರವಾಗಿ ಕಾಯಂ ಅಭಿಯಂತರರನ್ನು ನೇಮಕ ಮಾಡಿ, ಜನತೆಯ ಗೋಳಾಟ ತಪ್ಪಿಸಬೇಕೆಂದು ಮತ್ತೊಮ್ಮೆ ತಿಮ್ಮಾಪುರ ಅವರನ್ನು ಆಗ್ರಹಿಸಿದ್ದಾರೆ.
ಸ್ಪಷ್ಟನೆ: ಮಹಾಲಿಂಗಪುರ ಪುರಸಭೆ ಎರಡು ಸ್ಥಾನಗಳಿಗೆ ಅಭಿಯಂತರರ ಮಂಜೂರಾತಿ ದೊರೆತಿದ್ದು, ಅದರಲ್ಲಿ ಒಂದು ಸ್ಥಾನಕ್ಕಾಗಿ ಡೆಪಟೇಷನ್ ಆಧಾರದ (ಮೂರು ದಿನ ಕೆಲಸ ಮಾಡುವ) ಅಭಿಯಂತರರನ್ನು ಬಿಟ್ಟರೆ ಇರುವ ಎರಡೂ ಸ್ಥಾನಗಳು ಖಾಲಿ ಇದ್ದಂತೆಯೇ ಸರಿ. ಇದರಿಂದ ಪಟ್ಟಣದ ಕೆಲಸ ಕಾರ್ಯಗಳ ಚಲನೆಯಲ್ಲಿಯೂ ಮಂದಗತಿ ನಡೆದಿದೆ. ಇದರಿಂದ ತೊಂದರೆಗೀಡಾಗುತ್ತಿರುವ ಸದಸ್ಯರ ಮತ್ತು ಜನತೆಯ ಪ್ರಶ್ನೆಗಳಿಗೆ ಉತ್ತರ ನೀಡಿ, ನೀಡಿ ನಮಗೆ ಸಾಕಾಗಿ ಹೋಗಿದ್ದು, ಪ್ರಸ್ತುತ ಸಮಸ್ಯೆ ದೂರವಾಗಬೇಕಾದರೆ ಪುರಸಭೆಗೆ ಕಾಯಂ ಅಭಿಯಂತರರ ನೇಮಕವಾಗಲೆಬೇಕು. ಇದರಿಂದ ಪಟ್ಟಣ ಇನ್ನಷ್ಟು ಅಭಿವೃದ್ಧಿ ಕಾಣಲಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 