ಗಂಗಾಪುರ ಪೇಟೆಯ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ
Sri Durga Devi Jatra Festival and Chariot Festival in Gangapurpet
ಲೋಕದರ್ಶನ ವರದಿ
ಗದಗ 25: ನಗರದ ಗಂಗಾಪುರ ಪೇಟೆಯ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವವು ಗದಗ-ಬೆಟಗೇರಿ ಅವಳಿ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ.ಪ್ರತಿ 3 ವರ್ಷಕ್ಕೊಮ್ಮೆ ಜರುಗುವ ಈ ಜಾತ್ರೆಯು ಹಿಂದಿನ ನಿಯಮಾವಳಿಗಳನ್ನ ಮುಂದುವರೆಸಿಕೊಂಡು ಬಂದಿರುವುದಾಗಿ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸಿದ್ದಪ್ಪ ಪಲ್ಲೇದ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜೂನ್ 28 ರಿಂದ ಜುಲೈ 13 ರ ವರೆಗೆ ಹೋಮ, ಧಾರ್ಮಿಕ, ಸಾಂಸ್ಕೃತಿಕ, ಆರೋಗ್ಯ ಶಿಬಿರ, ನಾಟಕ, ರೈತರಿಗೆ ಜಾಗೃತಿ ಕಾರ್ಯಕ್ರಮ, ಶ್ರೀ ದೇವಿಯ ಸಹಸ್ರ ನಾಮಾವಳಿ ಪಠಣ ಸೇರಿದಂತೆ ವಿವಿಧ ಮನರಂಜನೆ ಕಾರ್ಯಕ್ರಮ ಜರುಗುವವು. ನೂತನ ಶ್ರೀದೇವಿಯ 15 ಕೆಜಿ ಬೆಳ್ಳಿ ಮೂರ್ತಿಯ ಪ್ರತಿಷ್ಠಾಪನೆ, ರಥೋತ್ಸವ, ಕಳಸಾರೋಹಣ, ಊರ ದೇವರಿಗೆ ಸಕಲ ಮಂಗಲ ವಾದ್ಯ ವೈಭವಗಳೊಂದಿಗೆ ಉಡಿ ತುಂಬುವುದು ಲಘು ರಥೋತ್ಸವ ಕಡುಬಿನ ಕಾಳಗ, ಸಾಮೂಹಿಕ ವಿವಾಹಗಳು,ಮಹಾ ಅನ್ನ ಸಂತರೆ್ಣ ಜರುಗುವುದಾಗಿ ತಿಳಿಸಿದರು.
ಈ ದುರ್ಗಾದೇವಿ ಜಾತ್ರೆಯಲ್ಲಿ ಅನೇಕ ಧರ್ಮದವರು ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಕಮಿಟಿಯ ವಿರುದ್ಧ ಅವಹೇಳನಕಾರಿ ಮಾತುಗಳನ್ನ ರಾಜು ಖಾನಪ್ಪನವರ ಹೇಳುತ್ತಿದ್ದು, ಇವರ ವಿರುದ್ಧ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸುವುದಾಗಿ ಇದೇ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಬಸವರಾಜ ಬೆಳಧಡಿ, ಅನಿಲಕುಮಾರ ಸಿದ್ದಮ್ಮನಹಳ್ಳಿ,ಯಮನಪ್ಪ ಗೋಬಿ, ಎಂ ಎಸ್ ಪಾಟೀಲ, ಈಶ್ವರ ಕೋಟಿ, ಬಸವರಾಜ ಹಿತ್ತಲಗುತ್ತಿ, ಸೋಮು ಚವಡಿ, ವೆಂಕಟೇಶ ಬಳ್ಳಾರಿ, ಶರಣಪ್ಪ ಗಾಣಿಗೇರ, ಪರಶುರಾಮ ಹಬೀಬ, ಬಸವರಾಜ ಅಣ್ಣಿಗೇರಿ, ದೇವಪ್ಪ ಮುದಕಟ್ಟಿ, ಹುಲಿಗೇಪ್ಪ ಜಡಿ, ಬಸಪ್ಪ ಶಿರೂರ, ಬಸವರಾಜ ಕವಳಿಕಾಯಿ, ಪ್ರದೀಪ ಗರಗ, ಯಲ್ಲಪ್ಪ ವಾಲಿಕಾರ, ಶರಣಪ್ಪ ಗಳಘಂಟಿ, ಮೋಹನ್ ಇಮ್ರಾಪುರ ಸೇರಿದಂತೆ ಇತರರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 