ನಿತ್ಯ ಯೋಗ ಧ್ಯಾನ ಪ್ರಾಣಯಾಮದಿಂದ ರೋಗ ದೂರ- ಪರ್ವೀನ್ ಯಲವಿಗಿ

ನಿತ್ಯ ಯೋಗ ಧ್ಯಾನ ಪ್ರಾಣಯಾಮದಿಂದ ರೋಗ ದೂರ- ಪರ್ವೀನ್ ಯಲವಿಗಿ  Regular yoga, meditation and pranayama keep diseases away - Parveen Yalavigi

 ರಾಣೆಬೆನ್ನೂರು 25 : ಜಿಲ್ಲಾ ಕೇಂದ್ರ ಹಾವೇರಿ ವಿನಾಯಕ ನಗರದ ನಾಗರಿಕ ವೇದಿಕೆಯ ಮಹಿಳಾ ಘಟಕವು, ತನ್ನ ಸಾಮಾಜಿಕ ಕಳಕಳಿಯೊಂದಿಗೆ ಇಲ್ಲಿನ ಉದ್ಯಾನವನದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಿತ್ತು.  

 ಯೋಗಾಸನ ಮತ್ತು ಯೋಗದಿಂದಾಗುವ ಆರೋಗ್ಯ ಪರಿಣಾಮಗಳು ಕುರಿತಂತೆ ಮಾತನಾಡಿದ ಯೋಗ ಸಾಧಕಿ ಶ್ರೀಮತಿ ಪರ್ವೀನ್ ಯಲವಿಗಿ ಅವರು, ಆಧುನಿಕ ಜೀವನ ಶೈಲಿ ನಮ್ಮ ದಿನ ನಿತ್ಯದ ಬದುಕಿನಲ್ಲಿ ಅನೇಕ ರೀತಿಯ ರೋಗರುಜನೆಗಳಿಗೆ ಬಲಿಯಾಗುವಂತಾಗಿದೆ.  

 ನಮ್ಮ ಪೂರ್ವಜರು, ಋಷಿಮುನಿಗಳು ಅನುಸರಿಸಿಕೊಂಡು ಬಂದಿರುವ ಯೋಗ, ಧ್ಯಾನ, ಪ್ರಾಣಯಾಮ ನಿತ್ಯವೋ ಅರ್ಧ ತಾಸುಗಳ ಕಾಲ ಸಮಯ ಮೀಸಲಿಟ್ಟು ಅಳವಡಿಸಿಕೊಂಡರೆ ನಾವು ಸದಾಕಾಲ ನಿರೋಗಿಗಳಾಗಿ ಬದುಕಬಹುದಾಗಿದೆ ಎಂದರು.  

 ಮಹಿಳಾ ಘಟಕದ ಹಿರಿಯ ಸದಸ್ಯರಾದ ಶಾಂತಕ್ಕ ಉಳ್ಳಾಗಡ್ಡಿ ಅವರು ಮಾತನಾಡಿ, ದಿನಾಚರಣೆ ಕೇವಲ ಒಂದು ದಿನಕ್ಕೆ ಮೀಸಲಾಗದೆ, ನಿತ್ಯ ಜೀವನ ಬದುಕಿನ ಜೊತೆಗೆ ಹವ್ಯಾಸವಾಗಿ ಅಳವಡಿಸಿಕೊಂಡರೆ, ಸದಾಕಾಲ ಶಾಂತಿ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಬಹುದಾಗಿದೆ ಸ್ವಾಸ್ಥ ಸಮಾಜಕ್ಕಾಗಿ ನಾವೆಲ್ಲ ಮಹಿಳೆಯರು ಇಂದು ಯೋಗ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.  

 ಕಾರ್ಯಕ್ರಮದಲ್ಲಿ ಸದಸ್ಯರಾದ ರತ್ನಾ  ನಾಯಕ, ಭಾರತಿ ಶೆಟ್ಟರ, ಅಕ್ಕಮ್ಮ ಸಾವಿತ್ರಮ್ಮ, ಹೇಜೀಬ, ಮಹಾದೇವಕ್ಕ, ಶಿಲ್ಪಾ, ಸುಮಿತ್ರಾ ಲಕ್ಷ್ಮಿ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.