ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ: ತರಬೇತಿ ಕಾರ್ಯಗಾರ ಯಶಸ್ವಿ
Special Comprehensive Voter Registration: Training Workshop a Success
ಲೋಕದರ್ಶನ ವರದಿ
ಬೆಳಗಾವಿ 25: ರಾಜ್ಯ ಚುನಾವಣಾ ಆಯೋಗ, ಕರ್ನಾಟಕ, ಬೆಂಗಳೂರು, ಹಾಗೂ ಜಿಲ್ಲಾಚುನಾವಣಾಧಿಕಾರಿಗಳ ನಿರ್ದೇಶನದಂತೆ, 13-ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಸಂಬಂಧ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ 2026ರ ಕುರಿತು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಪ್ರಯುಕ್ತ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ದಿನಾಂಕ 22-06-2026 ಹಾಗೂ 23-06-2026 ರಂದು ಬೆನನ್ ಬೆಳಗಾವಿ ಸ್ಮೀತ ಡಿಗ್ರಿ ಕಾಲೇಜ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅದೇ ರೀತಿಯಲ್ಲಿ ರಾಜಕೀಯ ಪಕ್ಷದಿಂದ ನೇಮಕಗೊಂಡ ಮತಗಟ್ಟೆ ಮಟ್ಟದ ಎಜೆಂಟರುಗಳಿಗೆ ದಿನಾಂಕ 24-06-2026 ರಂದು ಕುಮಾರ ಗಂಧರ್ವ ರಂಗ ಮಂದಿರದಲ್ಲಿ ತರಭೇತಿಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು 13-ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳ ಸಿ.ಡಬ್ಲು. ಶಕೀಲ ಅಹ್ಮದ ಹಾಗೂ ಸಹಾಯಕ ನೋಂದಣಾಧಿಕಾರಿಗಳಾದ ತಹಶೀಲ್ದಾರ ಎಚ್.ಎನ್. ಶಿರಹಟ್ಟಿ ರವರು ತಿಳಿಸಿರುತ್ತಾರೆ.
ಸದರಿ ಮತಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಎಲ್ಲ ಸಹಭಾಗಿತ್ವ ಅತೀ ಮುಖ್ಯವಾಗಿರುತ್ತದೆ. ಎಲ್ಲ ರಾಜಕೀಯ ಮುಖಂಡರು, ಸಾರ್ವಜನಿಕರು ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಭಾಗಿಯಾಗಿ ಮತದಾನ ಪ್ರಮಾಣ ಹೆಚ್ಚಿಸಿ ಸದೃಢ ದೇಶದ ಬುನಾದಿಗೆ ಸಹಕರಿಸಬೇಕು ಅದಲ್ಲದೆ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಮಾಹಿತಿ ಕಲೆ ಹಾಕಿ ಈ ಪರಿಷ್ಕರಣೆ ಕಾರ್ಯದ ಗುರಿ ಸಾಧಿಸಬೇಕೆಂದು ತರಬೇತುದಾರರಾದ ಮಾಸ್ಟರ್ ಟ್ರೇನರಗಳು ತರಭೇತಿಯನ್ನು ನೀಡಿದರು.
13-ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ 2,68,282 ಮತದಾರರಿದ್ದು, ಅದರಲ್ಲಿ ಈಗಾಗಲೇ 2,58,103 ಮತದಾರರನ್ನು ಸಮಗ್ರ ಪರಿಷ್ಕರಣೆ ಮಾಡಲಾಗಿದ್ದು, ಇನ್ನೂ ಕೆಲ ಮತದಾರರನ್ನು ಪರಿಷ್ಕರಣೆ ಮಾಡಿದರೆ 100ಅ ಪ್ರತಿಶದಷ್ಟು ಗುರಿ ಸಾಧಿಸಿದಂತಾಗುತ್ತದೆ. ಆ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ಮಾಸ್ಟರ್ ಟ್ರೇನರಗಳಾದ ಡಾ. ಎನ್.ಬಿ.ಮರೇನ್ನವರ, ಕೆ. ಶ್ಯಾಮ್ ಪ್ರಸಾದ, ಕಾಶೀನಾಥ ಮೇಳೆದ, ಪುಂಡಲೀಕ ಮುಂಚಂಡಿಕರ, ಡಾ: ರಾಘವೇಂದ್ರ ಕೆ, ಎಮ್ ಎನ್ ತಮುಚೆ, ಸಂತೋಷ ಮೇದಾರ, ಸಾಗರ ಹರಡೆ ಹಾಗೂ ಚುನಾವಣೆ ಶಾಖೆಯ ಶಿರಸ್ತೇದಾರ ಎಂ. ಪಾವಲಿ, ಅಶೋಕ ಕಬ್ಬಲಿಗೇರ ಹಾಗೂ ಕಲಿಮುಲ್ಲಾ ಸೇರಿದಂತೆ ಎಲ್ಲ ಬಿಎಲ್‌ಓ ಸೂಪರ್ ವೈಜರ್, ಬಿಎಲ್‌ಓಗಳು, ಬಿಎಲ್‌ಎಗಳು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 