ದೇಶದಲ್ಲಿ 7,000 ದಾಟಿದ ಪ್ರಕರಣಗಳು, ಸಾವಿನ ಸಂಖ್ಯೆ 239 ಕ್ಕೆ ಏರಿಕೆ

ನವದೆಹಲಿ, ಏಪ್ರಿಲ್ 11,ದೇಶದಲ್ಲಿ ಕೊರೊನಾವೈರಸ್ ಸೋಂಕಿನ ದೃಢಪಟ್ಟ ಪ್ರಕರಣಗಳು ಶನಿವಾರ ಬೆಳಿಗ್ಗೆ 7,000 ದಾಟಿದ್ದು, 33 ಪ್ರಕರಣಗಳೊಂದಿಗೆ ಸಾವಿನ ಸಂಖ್ಯೆ 239 ತಲುಪಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಸದ್ಯ, ದೃಢಪಟ್ಟ ಪ್ರಕರಣಗಳ ಸಂಖ್ಯೆ 7,447 ರಷ್ಟಿದೆ.  ಸಕ್ರಿಯ ಪ್ರಕರಣಗಳು 6,565 ರಷ್ಟಿದ್ದರೆ, ಗುಣಪಡಿಸಿದ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಸುಧಾರಣೆಯಾಗಿದ್ದು, ಈ ಸಂಖ್ಯೆ 642ರಷ್ಟಿದೆ.ಸಾಂಕ್ರಾಮಿಕ ರೋಗ ಇನ್ನೂ ಸಮುದಾಯ ಪ್ರಸರಣ ಹಂತಕ್ಕೆ ತಲುಪಿಲ್ಲ ಎಂದು ಸರ್ಕಾರ ಶುಕ್ರವಾರ ಹೇಳಿದೆ. ಕೊವಿದ್-19 ನಿಂದ ಇದುವರೆಗೆ ಹೆಚ್ಚು ಭಾದಿತವಾದ ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ 1574 ಕ್ಕೆ ಏರಿದೆ. ನಂತರ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 911 ಪ್ರಕರಣಗಳು ದೃಢಪಟ್ಟಿವೆ. ಮೂರನೇ ಸ್ಥಾನದಲ್ಲಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 903 ಪ್ರಕರಣಗಳು ದೃಢಪಟ್ಟಿವೆ.ರಾಜಸ್ಥಾನದಲ್ಲಿ 553, ತೆಲಂಗಾಣದಲ್ಲಿ 473 ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ರಾಜಸ್ಥಾನ, ತೆಲಂಗಾಣ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚು ಏರಿಕೆ ಕಂಡುಬಂದಿದೆ.ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು, ಇದುವರೆಗೆ 110 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 33 ಗುಜರಾತ್ ನಲ್ಲಿ ಸೋಂಕಿನಿಂದ 19 ಮಂದಿ ಬಲಿಯಾಗಿದ್ದಾರೆ.