ದುಬೈ, ಆ 20 ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಅಖಿಲ ಧನಂಜಯ್ ಅನುಮಾನಸ್ಪದ ಬೌಲಿಂಗ್ ಮಾಡಿರುವ ಕುರಿತು ವರದಿಯಾಗಿದೆ.
ಗಾಲೆಯಲ್ಲಿ ಆ.14 ರಿಂದ 18ರವರೆಗೆ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಇಬ್ಬರು ಸಂಶಯಾಸ್ಪದ ಬೌಲಿಂಗ್ ಮಾಡಿರುವ ವರದಿಯನ್ನು ಪಂದ್ಯದ ಅಧಿಕಾರಿಗಳು ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ಎರಡೂ ತಂಡಗಳ ಮ್ಯಾನೇಜ್ಮೆಂಟ್ಗೆ ನೀಡಿದ್ದಾರೆ.
ಈ ಬಗ್ಗೆ ಆ.18 ರಂದು ವರದಿಯಾದ ದಿನದಿಂದ ಮುಂದಿನ 14 ದಿನಗಳಲ್ಲಿ ಈ ಇಬ್ಬರೂ ಐಸಿಸಿ ಎದುರು ಬೌಲಿಂಗ್ ಪರೀಕ್ಷೆ ಎದುರಿಸಬೇಕಾಗುತ್ತದೆ. ಬೌಲಿಂಗ್ ಟೆಸ್ಟ್ ವರದಿ ಫಲಿತಾಶ ಹೊರಹೊಮ್ಮುವವರೆಗೂ ಈ ಇಬ್ಬರೂ ಬೌಲಿಂಗ್ ಮುಂದುವರಿಸಬಹುದು. ಧನಂಜಯ್ ಅವರು ಶ್ರೀಲಂಕಾ ಮೊದಲನೇ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಕಿವೀಸ್ ನಾಯಕ ವಿಲಿಯಮ್ಸನ್ ಕೇವಲ ಮೂರು ಓವರ್ ಆಫ್ ಬ್ರೇಕ್ ಬೌಲಿಂಗ್ ಮಾಡಿದ್ದರು.
ಇವರಿಬ್ಬರ ತಮ್ಮ ವೃತ್ತಿ ಜೀವನದಲ್ಲಿ ಇದಕ್ಕೂ ಮುನ್ನ ಕಾನೂನುಬಾಹಿರ ಬೌಲಿಂಗ್ ಮಾಡಿರುವ ಕುರಿತು ವರದಿಯಾಗಿತ್ತು. 2014ರ ಜುಲೈನಲ್ಲಿ ವಿಲಿಯಮ್ಸನ್ ಹಾಗೂ 2018ರ ಡಿಸೆಂಬರ್ನಲ್ಲಿ ಅಖಿಲ ಧನಂಜಯ್ ಅಮಾನತುಗೊಂಡಿದ್ದರು.