ಎಲ್ಲ ರೈಲುಗಳಲ್ಲಿ ವೈಫೈ ಸೌಲಭ್ಯ: ಪಿಯೂಷ್ ಗೊಯೆಲ್

 ನವದೆಹಲಿ,  ಅ. 24:     ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಎಲ್ಲ ರೈಲುಗಳಲ್ಲಿ ವೈಫೈ ಸೌಲಭ್ಯ ಒದಗಿಸುವುದಾಗಿ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಭರವಸೆ ನೀಡಿದ್ದಾರೆ.  ಇದು ಪ್ರಯಾಣಿಕರಿಗೆ ಒದಗಿಸುವ ಸೇವೆ ಮತ್ತು ಸುರಕ್ಷೆತೆಯ ಸುಧಾರಣೆಗೆ ಪೂರಕವಾಗಲಿದೆ ಎಂದು ಅವರು ಹೇಳಿದ್ದಾರೆ. ಇದೀಗ ದೇಶದ 5,200 ನಿಲ್ದಾಣಗಳಲ್ಲಿ ಗೆ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ  ದಿನಗಳಲ್ಲಿ ಇದು 6,500 ನಿಲ್ದಾಣಗಳಿಗೆ ತಲುಪುವ ಗುರಿ ಇದೆ. ಆಪ್ಟಿಕಲ್ ಫೈಬರ್ ತಲುಪದಂಥ ಅಥವಾ ಪೂರಕ ಪರಿಸರ ಇಲ್ಲದ ಕೆಲ ತಾಂತ್ರಿಕ ಸಮಸ್ಯೆಗಳನ್ನು ಹೊಂದಿರುವ 1,000 ನಿಲ್ದಾಣಗಳಿಗೆ ಈ ಸೇವೆ ಒದಗಿಸಲು ವಿಳಂಬವಾಗಬಹುದು ಎಂದು ಹೇಳಿದ್ದಾರೆ. ಇದಕ್ಕೆ ಆರರಿಂದ ಎಂಟು ತಿಂಗಳು ಬೇಕಾಗಬಹುದು. ಆ ಬಳಿಕ ಸಂಚರಿಸುವ ರೈಲುಗಳಲ್ಲಿ ವೈಫೈ ಒದಗಿಸುವುದು ನಮ್ಮ ಉದ್ದೇಶವಾಗಿದೆ  ಮುಂದಿನ ದಿನಗಳಲ್ಲಿ ಎಲ್ಲ ಪ್ರಯಾಣಿಕ ರೈಲುಗಳಲ್ಲಿ ವೈಫೈ ಸೌಲಭ್ಯ ಇರಲಿದೆ ಎಂದೂ ಸಚಿವರು ಷ್ಟಪಡಿಸಿದರು.