ಶನಿವಾರವೇ ತೀಪು ಏಕೆ ಪ್ರಕಟ?

ನವದೆಹಲಿ, ನ 9 :    ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಇದೇ 17 ರಂದು ಅಧಿಕಾರದಿಂದ ನಿವೃತ್ತರಾಗಲಿದ್ದು ಮುಂದಿನ ವಾರ ಪ್ರಕಟವಾಗಬೇಕಿದ್ದ ಅಯೋಧ್ಯೆ ಭೂ ವಿವಾದದ ತೀಪು ಇಂದೇ ಪ್ರಕಟವಾಗುತ್ತಿರುವುದು ಏಕೆ?    ನವೆಂಬರ್ 17 ಭಾನುವಾರ. ಅಂದೇ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾಗುತ್ತಿದ್ದಾರೆ. ಇನ್ನು 16 ನೇ ತಾರೀಖು ಶನಿವಾರ. ನ್ಯಾಯಮೂರ್ತಿಗಳು ನಿವೃತ್ತರಾಗುವ ಹಿಂದಿನ ದಿನ ಮಹತ್ವದ ತೀರ್ಪನ್ನು ನೀಡುವ ಪರಿಪಾಠ ಇಲ್ಲ. ಮೇಲಾಗಿ ಶನಿವಾರ. ಇನ್ನು ನವೆಂಬರ್ 15 ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಅವರ ಕೊನೆಯ ಕೆಲಸದ ದಿನವಾಗಿದೆ. ಈ ಮೊದಲು ನಿರೀಕ್ಷೆ ಮಾಡಿದ್ದಂತೆ ಇದೇ 14 ಮತ್ತು 15 ರಂದು ಸಂವಿಧಾನ ನ್ಯಾಯಪೀಠದಿಂದ ಪ್ರಕರಣವನ್ನು ವಿಚಾರಣೆ ಒಳಪಡಿಸಬಹುದು ಎಂಬ ಊಹಾಪೋಹ ಸಹ ಹಬ್ಬಿತ್ತು.    ನ್ಯಾಯಾಲಯ ತೀಪು ಪ್ರಕಟಿಸಿದರೆ, ಪ್ರತಿವಾದಿಗಳು ತೀರ್ಮಾನವನ್ನು ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ನ್ಯಾಯಾಲಯವನ್ನು ಕೋರುವುದು, ಮತ್ತೆ ಪುನರ್ ಮನವಿ ಸಲ್ಲಿಸುವುದು ಸಹಜವಾಗಿರುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಮತ್ತು ಮುಂದಿನ ವಾರ ಸೋಮವಾರ, ಮಂಗಳವಾರ ಮತ್ತು ಶುಕ್ರವಾರ ರಜೆ ಬಂದಿರುವ ಕಾರಣ ಅಯೋಧ್ಯೆ ತೀರ್ಪನ್ನು ಶನಿವಾರವೇ ಪ್ರಕಟಿಸುವ ನಿರ್ಧಾರವನ್ನು ಸಂವಿಧಾನ ಪೀಠ ಕೈಗೊಂಡಿದೆ.