ಬೆಂಗಳೂರು, ಆ 27 ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುಟ್ಟ ಮಗಳು ಐರಾ ಜೊತೆ ಹ್ಯಾಪಿಯಾಗಿದ್ದಾರೆ ವರಮಹಾಲಕ್ಷ್ಮಿ ಹಬ್ಬದಲ್ಲಿ ಚಂದದ ಡ್ರಸ್ ಹಾಕಿಸಿ 'ನಮ್ಮ ಮನೆಯ ಪುಟ್ಟ ಲಕ್ಷ್ಮಿ' ಎಂದು ಬಣ್ಣಿಸಿದ್ದರು, ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ್ದರು ಆದ್ರೂ ಇತ್ತೀಚೆಗೆ ಯಶ್ ಬಿಕ್ಕಿ ಬಿಕ್ಕಿ ಅತ್ತರಂತೆ ಅದಕ್ಕೆ ಕಾರಣ ಯಾರು ಗೊತ್ತಾ? ಅವರ ಮಗಳು!
ಅದೇನಾಯ್ತು ಅಂದ್ರೆ, ಪುಟಾಣಿ ಐರಾಳಿಗೆ ಕಿವಿ ಚುಚ್ಚಿಸಿದ್ದಾರೆ, ಈ ವೇಳೆ ನೋವು ತಾಳಲಾರದೆ ಕಿಟಾರ್ ಎಂದು ಕಿರುಚಿಕೊಂಡ ಪುಟಾಣಿಯನ್ನ ನೋಡಿ ಯಶ್ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟರಂತೆ
ಕಿವಿಗೆ ಓಲೆ ಧರಿಸಿ ಮುದ್ದು ಮುದ್ದಾಗಿ ಕಾಣಿಸುತ್ತಿರುವ ಪುಟಾಣಿ ಐರಾಳ ಜೊತೆ ಪೋಟೋ ಕ್ಲಿಕ್ಕಿಸಿ ಕೊಂಡಿರುವ ರಾಧಿಕಾ ಆ ಪೋಟೋ ವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ನಾವು ಐರಾಳಿಗೆ ಕಿವಿ ಚುಚ್ಚಿಸಿದ್ದೇವೆ ಪೋಷಕರಾಗಿ ಈ ಸಂದರ್ಭಕ್ಕೆ ಸಾಕ್ಷಿಯಾಗಲು ನಿಜಕ್ಕೂ ಕಷ್ಟವಾಗುತ್ತದೆ" ಎಂದು ಹೇಳಿಕೊಂಡಿದ್ದಾರೆ
ತಂದೆ ತಾಯಿಯ ಪ್ರೀತಿಯ ಪಾಲನೆಯಲ್ಲಿ ಐರಾ ಮುದ್ದಾಗಿ ಬೆಳೆಯುತ್ತಿದ್ದಾಳೆ ರಾಧಿಕಾ ಪಂಡಿತ್ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದರೆ, ಯಶ್ ಕೆಜಿಎಫ್-2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ