ಆರ್.ಎಸ್.ಎಸ್ 52 ವರ್ಷಗಳಕಾಲ ಭಾರತದ ತ್ರಿವರ್ಣ ಧ್ವಜವನ್ನು ಏಕೆ ಹಾರಿಸಲಿಲ್ಲ..?.... ನಿಮಗೆ ಗೊತ್ತೇ?

ಹೌದು, 1950 ರಿಂದ 2002 ರ ವರೆಗೆ ಆರ್.ಎಸ್.ಎಸ್ .ಎಸ್  ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ ನಿಜ. ಹಾಗಾದರೆ ಈ ರಾಷ್ಟ್ರಧ್ವಜವನ್ನು ಹಾರಿಸದಿರುವ ಸತ್ಯವೇನು? ಬನ್ನಿ ತಿಳಿದುಕೊಳ್ಳೋಣ...! 1950 ರ ನಂತರ ಖಖಖ ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು ನಿಲ್ಲಿಸಿದ ನಂತರ ಏನಾಯಿತು? ಮತ್ತು ಯಾಕೆ ಆಯ್ತು..??  

ಸ್ವಾತಂತ್ರ್ಯಾನಂತರ ಸಂಘದ ಶಕ್ತಿ ನಿರಂತರವಾಗಿ ಹೆಚ್ಚುತ್ತಲೇ ಇತ್ತು ಮತ್ತು ಸಂಘವು ರಾಷ್ಟ್ರೀಯ ಹಬ್ಬಗಳಾದ ಆಗಸ್ಟ್‌ 15 ಮತ್ತು ಜನವರಿ 26ರನ್ನು  ವಿಜೃಂಭಣೆಯಿಂದ ಆಚರಿಸಲು ಪ್ರಾರಂಭಿಸಿತು. ಸಾರ್ವಜನಿಕರು ಸಹ ಅದರಲ್ಲಿ ಸಂತೋಷದಿಂದ ಪಾಲ್ಗೊಳ್ಳಲು ಪ್ರಾರಂಭಿಸಿದರು. ರಾಷ್ಟ್ರೀಯತೆ ಜನರಲ್ಲಿ ಜಾಗೃತಗೊಳ್ಳುತ್ತಿದೆ. ಮುಂದೊಂದು ದಿನ ನಮ್ಮ ಅಧಿಕಾರಕ್ಕೆ  ಇದು ತೊಂದರೆ ಆಗಬಹುದು  ಎಂಬ  ಕಾರಣದಿಂದಾಗಿ; ಹಾಗೂ ಇದನ್ನು ಹೀಗೇ ಬಿಟ್ಟರೆ ತಮ್ಮ ಸಿಂಹಾಸನಕ್ಕೆ ಕುತ್ತು ಬರತ್ತೆ  ಎಂದು ಮನಗಂಡರು ನೆಹರೂ.   

ಅವರು ಅತೀ  ಬುದ್ಧಿವಂತಿಕೆಯಿಂದ ಭಾರತದ ಸಂವಿಧಾನದ "ರಾಷ್ಟ್ರೀಯ ಧ್ವಜ ಸಂಹಿತೆ"ಯಲ್ಲಿ ಒಂದು ಅಧ್ಯಾಯವನ್ನು ಸೇರಿಸಿದರು. ರಾಷ್ಟ್ರೀಯ ಧ್ವಜ ಸಂಹಿತೆಯನ್ನು 1950 ರಲ್ಲಿ ಜ್ಯಾರಿಗೊಂಡ ಸಂವಿಧಾನದ ಇತರ ವಿಭಾಗಗಳೊಂದಿಗೆ ಜಾರಿಗೆ ತರಲಾಯಿತು. ಇದರ ಪ್ರಕಾರ ಸರ್ಕಾರಿ ಕಟ್ಟಡಗಳ ಮೇಲೆ ನಿರ್ದಿಷ್ಟ ವ್ಯಕ್ತಿಗಳು ಮಾತ್ರ ರಾಷ್ಟ್ರಧ್ವಜವನ್ನು ಹಾರಿಸಬಹುದು. ಯಾರಾದರೂ ಅದನ್ನು ಉಲ್ಲಂಘಿಸಿದರೆ, ಕಠಿಣ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು.  

ಅದರಂತೆ ಇನ್ನು ಮುಂದೆ ಸಂಘದ ಶಾಖೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತಿಲ್ಲ.  ಅವು ಖಾಸಗಿ ಸ್ಥಳಗಳು, ಸರ್ಕಾರಿ ಕಟ್ಟಡಗಳಲ್ಲ. ಸಂಘವು ಕಾನೂನನ್ನು ಅನುಸರಿಸಿ ತ್ರಿವರ್ಣಧ್ವಜವನ್ನು ಹಾರಿಸುವುದನ್ನು ನಿಲ್ಲಿಸಿತು.  

ನೆಹರೂರವರು ಭಯದಿಂದ ಈ ಕಾನೂನನ್ನು ಜಾರಿಗೊಳಿಸಿದ್ದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ, ಇಲ್ಲದಿದ್ದರೆ ಇದಕ್ಕೆ ಯಾವುದೇ ಸಮರ್ಥನೆ ಇಲ್ಲ. ಏಕೆಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಬೀದಿಗಿಳಿದಿದ್ದರು. ಆದರೆ ಏಕಾಏಕಿ ತನ್ನ ದೇಶದ ಧ್ವಜಾರೋಹಣ ಮಾಡುವ ಹಕ್ಕನ್ನು ಅದೇ ಜನಸಾಮಾನ್ಯರಿಂದ ಮತ್ತು  ಸ್ವತಂತ್ರ ಭಾರತದ ಜನರಿಂದ ಕಸಿದುಕೊಳ್ಳಲಾಯಿತು; ಮತ್ತು ಲಕ್ಷಾಂತರ ಜನರು ಬಲಿಕೊಟ್ಟು ಪಡೆದ ತ್ರಿವರ್ಣಧ್ವಜವನ್ನು ಹಾರಿಸುವ ಹಕ್ಕು ನೆಹರೂ ಗಾಂಧಿ ಕುಟುಂಬದ ಆಸ್ತಿಯಾಗಿ ಮಾರ​‍್ಪಟಟಿತ್ತು.  

ನವೀನ್ ಜಿಂದಾಲ್ ಅಮೆರಿಕದಲ್ಲಿ ಓದುತ್ತಿದ್ದಾಗ ಪ್ರತಿ ಖಾಸಗಿ ಸಂಸ್ಥೆ, ಪ್ರತಿ ಅಂಗಡಿ, ಸರಕುಗಳ ಮೇಲೆ ಅಮೆರಿಕದ ರಾಷ್ಟ್ರಧ್ವಜ ಹಾರಿಸಿರುವುದನ್ನು ನೋಡುತ್ತಿದ್ದರು. ಆಗ ಅವರ ಮನಸ್ಸಿನಲ್ಲಿ ಅಮೆರಿಕನ್ನರಂತೆ ನಾವು ಭಾರತೀಯರು ಕೂಡಾ ನಮ್ಮ ಕಚೇರಿಗಳಲ್ಲಿ, ನಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು. ಏಕೆ ಈ ಹಕ್ಕನ್ನು ನಾವು ಪಡೆದಿಲ್ಲ ಎಂದು ಪದೇ ಪದೇ ಯೋಚಿಸಿದರು.  

ಒಮ್ಮೆ ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ತಮ್ಮ ಕಾರ್ಖಾನೆ ’ಜಿಂದಾಲ್ ವಿಜಯನಗರ ಸ್ಟೀಲ್ಸ್‌’ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿಯೇ ಬಿಟ್ಟರು. ಕೂಡಲೇ  ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರನ್ನು ಬಂಧಿಸಲಾಯಿತು. ಇದಾದ ಬಳಿಕ ಸುದೀರ್ಘ ಕಾನೂನು ಹೋರಾಟ ನಡೆಸಿದ ಫಲವಾಗಿ 2002ರಲ್ಲಿ ಭಾರತದ ಧ್ವಜವನ್ನು ಪ್ರತಿಯೊಬ್ಬ ಪ್ರಜೆಯೂ ಹಾರಿಸಬಹುದು ಎಂದು ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಖಾಸಗಿ ಕಟ್ಟಡದ ಮೇಲೆ ಕೂಡ ಹಾರಿಸಬಹುದು. ಅವರು ರಾಷ್ಟ್ರಧ್ವಜದ ಗೌರವವನ್ನು ನೋಡಿಕೊಳ್ಳುತ್ತಾರೆ ಮತ್ತು ಧ್ವಜ ಸಂಹಿತೆಯ ಪ್ರಕಾರ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ.  

ಅಂದಿನಿಂದ ಸಂಘದ ಪ್ರತಿಯೊಂದು ಶಾಖೆಯಲ್ಲಿ ನಿರಂತರವಾಗಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿದೆ. ಈ ಸತ್ಯಗಳನ್ನು ಅಲ್ಲಗಳೆಯುವ ಕಾಂಗ್ರೆಸ್ಸಿಗ, ಎಡಪಂಥೀಯ ಅಥವಾ ಬುದ್ಧಿಜೀವಿ ಯಾರಾದರೂ ಇದ್ದಾರೆಯೇ...? ಇಂದೂ ಅದೇ ಪ್ರಶ್ನೆಗಳನ್ನು ಕಾಂಗ್ರೆಸ್ಸಿಗರು ಎತ್ತುತ್ತಿದ್ದಾರೆ. ವಿಪರ್ಯಾಸ ಎಂದರೆ ವಾಮಪಂಥೀಯರು ಹಾಗೂ ಪಕ್ಕದ ರಾಷ್ಟ್ರವನ್ನು ಬೆಂಬಲಿಸುವ ಮನಸ್ಥಿತಿಯ ಜನರು ರಾಷ್ಟ್ರಗೀತೆಯ ಸಮಯದಲ್ಲಿ ಕುರ್ಚಿಯಿಂದ ಮೇಲೇಳುವುದಿಲ್ಲ. ತನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕುಳಿತುಕೊಂಡೇ ಇರುತ್ತಾರೆ.  

ಗೂಗಲ್‌ನಲ್ಲಿ ನೀವು ಅನೇಕ ಕಾಂಗ್ರೆಸ್ಸಿಗರು ಮತ್ತು ಎಡಪಂಥೀಯರ ಬ್ಲಾಗ್‌ಗಳನ್ನು ಕಾಣಬಹುದು. ಅದರಲ್ಲಿ ಸತ್ಯಗಳನ್ನು ತಿರುಚಿದ್ದು ಕಂಡುಬರುತ್ತೆ.  

ಹಾಗೆಯೇ 1950ಕ್ಕಿಂತ ಮೊದಲು ಮತ್ತು 2002ರ ನಂತರ ಸಂಘವು ತ್ರಿವರ್ಣ ಧ್ವಜವನ್ನು ಹಾರಿಸುತ್ತಿದೆ ಎಂಬುದು  ಎಲ್ಲೆಡೆ ಕಂಡುಬರುತ್ತದೆ. ಹಾಗಾದರೆ ತ್ರಿವರ್ಣಧ್ವಜಾರೋಹಣದ ನಿಜವಾದ ಅಪರಾಧಿ ಯಾರು..? ರಾಷ್ಟ್ರಧ್ವಜವನ್ನು ಭಾರತೀಯರಿಂದ ಏಕೆ ಮತ್ತು ಹೇಗೆ ಕಸಿದುಕೊಳ್ಳಲಾಯಿತು ಎಂಬ ಪ್ರಶ್ನೆಗೆ ಉತ್ತರ ಈಗ ಸಿಕ್ತಾ...??  

 ಮಂಜುನಾಥ ಹೆಗಡೆ ಅವರ ಅಂಕಣದಿಂದ  

 ಸಂಗ್ರಹಿಸಲ್ಪಟ್ಟ ಬರಹ...  

-  * * * -