ಲೋಕದರ್ಶನ ವರದಿ
ಗಜೇಂದ್ರಗಡ: ರಾಜೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಷರ್ಿ ವಾಲ್ಮೀಕಿಯ ಭಾವಚಿತ್ರ ಮೇರವಣಿಗೆಯೊಂದಿಗೆ ಸುಮಂಗಲೆಯರಿಂದ ಕುಂಭ ಮೇರವಣಿಗೆ ಜರುಗಿತು.
ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯ ಎಂದು ಶರಣಪ್ಪ ಯಲ್ಲಪ್ಪ ಜೋಗಿನ ಹೇಳಿದರು. ತಾಲೂಕು ಪಂಚಾಯತಿ ಸದಸ್ಯರಾದ ಶಶಿಧರ ಹೂಗಾರ ಮಾತನಾಡುತ್ತಾ ವಾಲ್ಮೀಕಿ ಅವರು ಮಾನವ ಕುಲಕ್ಕೆ ತನ್ನದೇ ಆದ ಕೊಡುಗೆ ನೀಡಿದ ಮಹಾನ್ ಚೇತನ. ಇಡೀ ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಕೊಡುಗೆ ವಾಲ್ಮೀಕಿಗೆ ಸಲ್ಲುತ್ತದೆ ಎಂದರು.
ಅಜ್ಞಾನ ತಾಂಡವಾಡುತ್ತಿದ್ದ ರತ್ನಾಕರ ನಿನಾದ ಕುಲದಲ್ಲಿ ಹುಟ್ಟಿ ಆದಿ ಕವಿಯಾಗಿ ಭಾನು, ಭೂಮಿ, ಪರ್ವತಗಳು, ಗ್ರಹತಾರೆ ನಕ್ಷತ್ರಗಳು, ಸಾಗರ ಸಮುದ್ರದವರೆಗೂ ರಾಮಾಯಣವು ಜನರ ಮನದಲ್ಲಿ ಮನೆ ಮಾಡುವಂತಹ ಸುಂದರವಾದ ಮಹಾಕಾವ್ಯ ಕಟ್ಟಿಕೊಟ್ಟ ಕೀತರ್ಿ ಮಹಷರ್ಿ ವಾಲ್ಮೀಕಿಯವರದ್ದು.
ವಾಲ್ಮೀಕಿ ರಾಮಾಯಣ ಪ್ರೇರಣೆಯಿಂದಾಗಿ ದೇಶದ ಅನೇಕ ಭಾಷೆಗಳಲ್ಲಿ ರಾಮಾಯಣ ಮಹಾಕಾವ್ಯ ರಚನೆಯಾಯಿತು. ದೇಶ-ವಿದೇಶ ಭಾಷೆಗಳಲ್ಲಿಯೂ ರಚಿಸಲ್ಪಟ್ಟ ಮಹಾ ಗ್ರಂಥವಾಗಿದೆ ಎಂದು ಎಪಿಎಂಸಿ ಸದಸ್ಯರಾದ ಸೂಗೀರಪ್ಪ ಕಾಜಗಾರ ಹೇಳಿದರು. ಕಾರ್ಯಕ್ರಮದಲ್ಲಿ ಶೇಖಪ್ಪ ಮಳಗಿ, ಶರಣಪ್ಪ ಉಪ್ಪಿನಬಟಗೇರಿ, ಅಪ್ಪಣ್ಣ ಎಲ್ ಮುಜಾವರ, ಶರಣಪ್ಪ ದೇ ಜಿಗಳೂರ, ನಿಂಗಪ್ಪ ಮ ಕೊಪ್ಪದ, ಅಂದಪ್ಪ ತಳವಾರ, ಕಳಕಪ್ಪ ಪ ತಳವಾರ, ಎಸ್ ಎಚ್ ಹಟ್ಟಿಮನಿ, ಶಿವಕುಮಾರ ಜಾಧವ, ರವಿ ಹಾವರಗಿ, ಬಾಲಪ್ಪ ತಳವಾರ ಸೇರಿದಂತೆ ಊರಿನ ಗುರು ಹಿರಿಯರು ಉಪಸ್ಥಿತರಿದ್ದರು.