ಬೆಂಗಳೂರು, ಏ.3, ಕೊರೋನ ಭೀತಿಯಲ್ಲಿ ಇಡೀ ದೇಶ ತತ್ತರಿಸಿ, 130+ ಕೋಟಿ ಜನರು ಲಾಕ್‌ಡೌನ್ ಕರಾಳ ದಿನ ಕಳೆಯುತ್ತಿರುವಾಗ, ಏಪ್ರಿಲ್ 5 ರಂದು ರಾತ್ರಿ ಮನೆಯ ಒಳೆಗೆ ಎಲ್ಲ ದೀಪವನ್ನು ಆರಿಸಿ, ಮನೆಯ ಮುಂದೆ ದೀಪ ಹಚ್ಚಿ ಎಂಬ ಹಿಂದೂ ಸಂಪ್ರದಾಯದ ಸೂತಕ ಕ್ರಿಯೆಯನ್ನು ಆಚರಿಸಿ ಎಂದು ಕರೆ ಮಾಡುವ ಮೂಲಕ ದೇಶದ ಪ್ರಧಾನಿ ರವರು ಯಾವ ಸಂದೇಶವನ್ನು ನೀಡ ಬಯಸುತ್ತಿದ್ದಾರೆ? ಎಂದು ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಅಧ್ಯಕ್ಷ ಅರ್. ಪ್ರಕಾಶ್ ಪ್ರಶ್ನಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂತಹ ಸಮಯದಲ್ಲಿ ಯಾವುದೇ ವೈಜ್ಞಾನಿಕವಾದ ವಿಚಾರಗಳನ್ನಾಗಲಿ, ಬಡವರ ಮತ್ತು ದಿನಗೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಹುಡಕುವ ನಿಟ್ಟಿನಲ್ಲಿ ಪ್ರಧಾನಿಯವರ ಸಂದೇಶವನ್ನು ನೀರಿಕ್ಷಿಸುತಿದ್ದ ಜನತೆಗೆ, ದೇಶವನ್ನು ಅಂಧಕಾರದತ್ತ ದೂಡುವ ಮತ್ತು ಹಿಂದೂ ಸಂಸ್ಕೃತಿಯಲ್ಲಿ ಇರುವ ಸೂತಕದ ಕ್ರಿಯೆಯನ್ನು ಪಾಲಿಸಿ ಎನ್ನುವ ಮೂಲಕ ನೀಡಿರುವ ಸಂದೇಶವನ್ನು ದೇಶದ ಜನತೆ ಚಿಂತಿಸಲಿ ಎಂದು ಅವರು ಕರೆ ನೀಡಿದ್ದಾರೆ.