ನವದೆಹಲಿ, ಡಿ ೧೮ ಎಲ್ಲ ಪಾಕಿಸ್ತಾನಿಯರಿಗೆ ಭಾರತೀಯ ಪೌರತ್ವ
ಕಲ್ಪಿಸುವ ತಾಕತ್ತು, ಧೈರ್ಯ ಕಾಂಗ್ರೆಸ್
ಪಕ್ಷಕ್ಕೆ ಇದ್ದರೆ, ಅದನ್ನು ಬಹಿರಂಗವಾಗಿ ಪ್ರಕಟಿಸಲಿ ಎಂದು ಪ್ರಧಾನಿ
ನರೇಂದ್ರ ಮೋದಿ ಹಾಕಿರುವ ಸವಾಲಿಗೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಹಣಕಾಸು ಸಚಿವ
ಪಿ. ಚಿದಂಬರಂ, ಈಗಾಗಲೇ ಪಾಕಿಸ್ತಾನ
ನಾಗರೀಕತ್ವ ಹೊಂದಿರುವವರಿಗೆ, ಭಾರತೀಯ ಪೌರತ್ವವನ್ನು ಏಕೆ ನೀಡಬೇಕು? ಎಂದು ಮರು ಪ್ರಶ್ನಿಸಿದ್ದಾರೆ. ಈ ರೀತಿಯ ಸವಾಲುಗಳನ್ನು ವಿರೋಧ ಪಕ್ಷಗಳಿಗೆ ಎಸೆಯುವುದರ ಹಿಂದಿನ
ಅರ್ಥವೇನು ಎಂದು ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.ದೇಶದ ಯುವಕರು, ವಿದ್ಯಾರ್ಥಿಗಳು ಉದಾರವಾದ,
ಜಾತ್ಯತೀತತೆ, ಸಹಿಷ್ಣುತೆಯ ಮನೋಭಾವ ಹಾಗೂ ಮಾನವತಾವಾದ ಪ್ರದರ್ಶಿಸುತ್ತಿದ್ದಾರೆ. ಆದರೆ, ಈ ಉನ್ನತ ಮೌಲ್ಯಗಳಿಗೆ ಸರ್ಕಾರ ಸವಾಲು ಹಾಕುತ್ತಿದೆಯೇ ಎಂದು ಅವರು ಕೇಳಿದ್ದಾರೆ.ಎಲ್ಲಾ ಪಾಕಿಸ್ತಾನಿಯರಿಗೆ ಭಾರತೀಯ
ಪೌರತ್ವ ಘೋಷಿಸುವ ಧೈರ್ಯ ಕಾಂಗ್ರೆಸ್ಸಿಗೆ ಇದೆಯೇ? ... ಕಾಶ್ಮೀರ ದಲ್ಲಿ
ವಿಶೇಷಾಧಿಕಾರ ಕಲ್ಪಿಸುವ ಸಂವಿಧಾನ ವಿಧಿ ೩೭೦ ಮತ್ತೆ ಜಾರಿಗೊಳಿಸುತ್ತೇವೆ. ತ್ರಿವಳಿ ತಲಾಖ್ ಕಾಯ್ದೆಯನ್ನು ರದ್ದುಪಡಿಸುತ್ತೇವೆ ಎಂದು ಬಹಿರಂಗವಾಗಿ ಘೋಷಿಸಲು
ಕಾಂಗ್ರೆಸ್ ಪಕ್ಷಕ್ಕೆ ತಾಕತ್ತು ಇದೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್ ವಿಧಾನಸಭಾ ಚುನಾವಣಾ ಸಭೆಯಲ್ಲಿ ನಿನ್ನೆ ಸವಾಲು ಹಾಕಿದ್ದರು. ಪೌರತ್ವ
ತಿದ್ದುಪಡಿ ಕಾಯ್ದೆಯಿಂದ ಯಾವುದೇ ಭಾರತೀಯ
ನಾಗರಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ
ಎಂದು ಅವರು ಪುನರುಚ್ಚರಿಸಿದರು. ಜಾಮಿಯಾ ಮಿಲಿಯಾ
ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ
ವಿರುದ್ಧ ಪೊಲೀಸರು ನಡೆಸಿ ಕ್ರಮಗಳನ್ನು ವಿರೋಧಿಸಿ ದೇಶಾದ್ಯಂತದ ಎಲ್ಲಾ ವಿಶ್ವವಿದ್ಯಾಲಯ
ಮತ್ತು ಕಾಲೇಜುಗಳಲ್ಲಿ ಪ್ರತಿಭಟನೆ ನಡೆಸಿರುವ ಕುರಿತು ಕಳವಳ ಮೋದಿ, ನಗರ ನಕ್ಸಲರು ರೂಪಿಸಿರುವ ಹುನ್ನಾರದಲ್ಲಿ ಸಿಲುಕಿಕೊಳ್ಳದಿರಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಮ್ಮ ಸ್ವಾರ್ಥಗಳಿಗಾಗಿ ನಗರ ನಕ್ಸಲರು, ಇತರ ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳ ಹೆಗಲ ಮೇಲೆ ಬಂದೂಕು
ಇರಿಸಿ ಸರ್ಕಾರದ ವಿರುದ್ದ
ಹಾರಿಸಲು ಪ್ರಯತ್ನಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ
ಸಮಸ್ಯೆಗಳಿದ್ದರೂ ಸರ್ಕಾರದೊಂದಿಗೆ ಪ್ರಜಾಸತ್ತಾತ್ಮಕ ಸಂವಾದದಲ್ಲಿ ತೊಡಗಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಅವರು ಕರೆ
ನೀಡಿದ್ದರು.