ನವದೆಹಲಿ, ಫೆ 5 : ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ಮೂರು ದಿನಗಳು ಬಾಕಿಯಿರುವಾಗಲೇ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರೀವಾಲ್, ಅಮಿತ್ ಶಾ ಅವರನ್ನು ಬಹಿರಂಗ ಚರ್ಚೆಗೆ ಆಗಮಿಸುವಂತೆ ಸವಾಲು ಹಾಕಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ದೆಹಲಿಯ ಅಭಿವೃದ್ಧಿಗಾಗಿ ನೀವೇನು ಮಾಡಿದ್ದೀರಿ. ಈ ಕುರಿತು ಬಹಿರಂಗ ಚರ್ಚೆ ನಡೆಸೋಣ ಎಂದು ಅಮಿತ್ ಶಾ ಅವರಿಗೆ ಸವಾಲು ಹಾಕಿದರು.
ದೆಹಲಿಯ ಜನರು ನಿಮಗೆ ಈಗಾಗಲೇ ಮತ ಹಾಕಿದ್ದು, ಅದರ ನೆರವಿನಿಂದ ನೀವು ಸಂವಿಧಾನದ 370ನೇ ವಿಧಿ ರದ್ದತಿ ಮತ್ತು ರಾಮಮಂದಿರ ನಿರ್ಮಾಣದ ಕಾನೂನು ಜಾರಿಗೆ ತಂದಿರಿ. ಆದರೆ ದೆಹಲಿಯ ಜನರಿಗಾಗಿ ನೀವೇನು ಮಾಡಿದ್ದೀರಿ. ಅವರೇಕೆ ನಿಮಗೆ ಮತ ಹಾಕಬೇಕು ಎಂದು ಬಿಜೆಪಿಯನ್ನು ಪ್ರಶ್ನಿಸಿದರು.
'ಆಪ್ ಶಾಹೀನ್ ಗನ್ ಮ್ಯಾನ್ ಲಿಂಕ್' ಎಂಬ ಬಿಜೆಪಿಯ ಹ್ಯಾಷ್ ಟ್ಯಾಗ್ ವಿರುದ್ಧ ಕಿಡಿಕಾರಿದ ಕೇಜ್ರೀವಾಲ್, 'ದೆಹಲಿಯ ಜನರು ಶಾಹೀನ್ ಬಾಗ್ ಪ್ರತಿಭಟನಕಾರರ ವಿರುದ್ಧ ನೀವೇಕೆ ಇನ್ನೂ ಏನೂ ಕ್ರಮ ಕೈಗೊಂಡಿಲ್ಲ ಎಂದು ತಿಳಿಯಲು ಬಯಸುತ್ತಿದ್ದಾರೆ. ನಾನು 'ಭಯೋತ್ಪಾದಕ' ಎಂಬ ನಿಮ್ಮ ಹೇಳಿಕೆಗೂ ದಾಖಲೆ ಕೋರುತ್ತಿದ್ದಾರೆ' ಎಂದಿದ್ದಾರೆ.
ಶಾಹೀನ್ ಬಾಗ್ ನಲ್ಲಿ ಗುಂಡು ಹಾರಿಸಿದ ಕಪಿಲ್ ಗುಜ್ಜಾರ್ ಗೂ ಎಎಪಿಗೂ ಸಂಬಂಧವಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಕೇಜ್ರೀವಾಲ್, ಎಎಪಿ ಸದಸ್ಯನಾಗಿದ್ದರೆ ಆತನನ್ನು ಶಿಕ್ಷಿಸಿ ಎಂದರು.
ನಮ್ಮ ದೇಶ ಜಗತ್ತಿನಲ್ಲಿ ಅತ್ಯುತ್ತಮ ದೇಶವಾಗಿದೆ. ಆದರೆ ನಮ್ಮ ವ್ಯವಸ್ಥೆ ಕುಲಗೆಟ್ಟುಹೋಗಿದೆ. ಆತ ಯಾವ ಪಕ್ಷಕ್ಕೆ ಸೇರಿದವನು ಎಂಬುದು ನಮಗೆ ತಿಳಿದಿಲ್ಲ. ಆದರೆ, ದೇಶದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಬೇಡ. ಆತನನ್ನು 10 ವರ್ಷಗಳ ಬದಲಿಗೆ 20 ವರ್ಷಗಳ ಕಾಲ ಜೈಲಿಗಟ್ಟಬೇಕು ಎಂದು ನಾನು ಗೃಹ ಸಚಿವರಿಗೆ ಮನವಿ ಮಾಡುತ್ತಿದ್ದೇನೆ ಎಂದರು.
ರಾಮಮಂದಿರ ನಿರ್ಮಾಣಕ್ಕೆ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪಿಸುವ ಕೇಂದ್ರದ ನಿರ್ಧಾಋಕ್ಕೆ ಪ್ರತಿಕ್ರಿಯಿಸಿದ ಅವರು, ಅದರಿಂದ ತಮಗೇನೂ ಸಮಸ್ಯೆಯಿಲ್ಲ ಎಂದರು.
;ಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ.