ಭಗವಂತನಿಗೆ ಬೇಕಾಗಿರುವುದು ಶುದ್ಧ ಭಾವ-ಓಂಕಾರ ಶಿವಾಚಾರ್ಯರು
ರಾಣೇಬೆನ್ನೂರ 17 : ನೂರು ದುಶ್ಚಟಗಳಿಗೆ ದಾಸನಾಗಿರುವವರನ್ನು ತಿದ್ದಬಹುದು, ಆದರೆ ದುರ್ಬುದ್ದಿ,ದುಶ್ಚಿಂತೆ, ದುರಾಲೋಚನೆ, ದುರ್ಗುಣಗಳ ಹೊಂದಿ ದುಷ್ಕಾರ್ಯಗಳ ಮಾಡುವ ವ್ಯಕ್ತಿಯನ್ನು ತಿದ್ದಲು ಸಾದ್ಯವಿಲ್ಲ. ದೊಡ್ಡಪೇಟೆ ಅವರಗೊಳ್ಳ ಹಿರೇಮಠದ ಶ್ರೀ ಷ. ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ಅವರು, ರಂಭಾಪುರಿ ಶಾಖಾ ಮಠದಲ್ಲಿ ತಾಲೂಕ ಜಂಗಮ ಸಮಾಜ ಮತ್ತು ಜಂಗಮ್ಮ ನೌಕರರ ವೇದಿಕೆ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಜಗದಾದಿ ಜಗದ್ಗುರು ರೇಣುಕರು ಹಾಗೂ ವೀರಶೈವ ಪರಂಪರೆಯನ್ನು ಹೀಗಳೆಯುವ ಜನರನ್ನು ತಿದ್ದಲು ಸಾಧ್ಯವಿಲ್ಲ. ಪರಮಶಿವನ ಆರಾಧನೆಗೆ ಕರ್ಮಕಾಂಡಗಳನ್ನು ತೊರೆದು ಶುದ್ಧ ಮನಸ್ಸಿನಿಂದ ಪೂಜಿಸುವ ತತ್ವವಾದ "ಅಹಂ ಬ್ರಹ್ಮಾಸ್ಮಿ" ಮತ್ತು "ಶಿವೋಹಂ" ಎಂಬ ತತ್ವಗಳಿಗೆ ವೀರಶೈವ ಚಿಂತನೆಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಂದಾಯ ನೀರೀಕ್ಷಕ ವಾಗೀಶ ಮಳೇಮಠ ಅವರು,ಜಗದ್ಗುರು ರೇಣುಕಾಚಾರ್ಯರು ಶೈವ ತತ್ತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ಪರಿಚಯಿಸಿ, ಅದನ್ನು ಜೀವನದ ಭಾಗವನ್ನಾಗಿ ಮಾಡಿದ ಮಹಾನ್ ಶರಣರು. ಬದುಕು ಮತ್ತು ತತ್ತ್ವಗಳು ಶೈವ ಸಮಾಜಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಇತಿಹಾಸ ಸ್ಮರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಎಸ್. ಸಿ. ಷಡಾಕ್ಷರಿಮಠ, ಮುತ್ತಣ್ಣ ಸುರಳಿಕೇರಿಮಠ, ಮುಕ್ತೇಶ ಕೊರಗುಂದಮಠ, ಸಿದ್ದಲಿಂಗ ಉಜ್ಜಯಿನಿಮಠ, ವಿ.ಎಸ್. ಹಿರೇಮಠ ಫಕೀರಯ್ಯ ಭಸ್ಮಾಂಗಿಮಠ, .ಕ.ಸಾ.ಪ ಗೌರವ ಕಾರ್ಯದರ್ಶಿ ಜಗದೀಶ ಮಳಿಮಠ, ವೀರಯ್ಯ ಸಾಲಿಮಠ, ಸೋಮಣ್ಣ ಹಿರೇಮಠ, ರವಿ ಪಾಟೀಲ ವಾಗೀಶ ನೀರಲಗಿಮಠ, ವಿ.ಎಸ್. ಪ್ರಸಾದಿಮಠ ವಿದ್ಯಾವತಿ ಮಳಿಮಠ, ಅಕ್ಕಮಹಾದೇವಿ ಹಿರೇಮಠ ಅಖಿಲೇಶ, ಶ್ರದ್ದಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಾಗೀಶ ಪಂಡಿತಾರಾಧ್ಯ ಪಾಠ ಶಾಲೆಯ ಶಾಸ್ತ್ರಿಗಳಾದ ಎಮ್ ಕೆ. ಹಾಲಸಿದ್ದೆಶ್ವರ ಶಾಸ್ತ್ರಿಗಳು, ರಾಜಶೇಖರ ಬೆಳವಗಿಮಠ ಅವರು ವೇದಘೋಷ ಮಾಡಿದರು.ಪ್ರಕಾಶ ಗಚ್ಚಿನಮಠ ಪ್ರಾರ್ಥಿಸಿದರು. ರವಿ ಪಾಟೀಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು