ಲೋಕದರ್ಶನ ವರದಿ
ಅಂಕೋಲಾ 10: ರಾಜ್ಯ ಮಟ್ಟದ ಪೋಲಿಸ್ ಕರ್ತವ್ಯಕೂಟ ಪರೀಕ್ಷಾ ಸ್ಪಧರ್ೆಯಲ್ಲಿ ಮಂಗ ಳೂರು ಪಶ್ಚಿಮ ವಲಯ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವುದರೊಂದಿಗೆ, ಸಮಗ್ರ ವೀರಾಗ್ರಣಿ ಪುರಸ್ಕಾರಕ್ಕೆ ಪಾತ್ರವಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ವಿವಿಧ ಠಾಣೆ ಮತ್ತು ವಿಭಾಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ತಮ್ಮದೇ ಆದ ಎದೆಗಾರಿಕೆ, ಚಾಕಚಕ್ಯತೆಯಿಂದ ಹೆಸರಾಗಿರುವ ಮತ್ತು ಜನಸ್ನೇಹಿಯಾಗಿ ಗಮನ ಸೆಳೆದಿರುವ ಪೊಲೀಸ್ ಅಧಿಕಾರಿಗಳಾದ ಕಾರವಾರ ಡಿಸಿಬಿ ಸಿಪಿಐ ಶರಣಗೌಡ ಪಾಟೀಲ್, ಅಂಕೋಲಾ ಪಿಸೈ ಶ್ರೀಧರ ಎಸ್. ಆರ್, ಸಿದ್ದಾಪುರದ ಸಿಪಿಐ ಜೋಯ್ ಅಂಥೋನಿ, ಕಾರವಾರ ಟ್ರಾಫಿಕ್ ಪಿಎಸೈ ವಿನಾಯಕ ಬಿಲ್ಲವ ನೇತೃತ್ವದ ಪಶ್ಚಿಮ ವಲಯ ಪೊಲೀಸ ತಂಡದಿಂದ ಪ್ರತಿನಿಧಿಸಿದ್ದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ತಂಡಕ್ಕೆ ಪೊಲೀಸ್ ಮಹಾ ನಿದರ್ೆಶಕಿ ನೀಲಮಣಿ ರಾಜು ಬಂಗಾರದ ಪದಕ, ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಮೆಡಿಕಲ್ ಓರಲ ಟೆಸ್ಟನಲ್ಲಿ ತೋರಿದ ಅನುಪಮ ಸಾಧನೆಗೆ ಸಿಪಿಐ ಶರಣಗೌಡ ಅವರಿಗೆ ಬಂಗಾರದ ಪದಕ ಮತ್ತು ಪಿಎಸೈ ವಿನಾಯಕ ಬಿಲ್ಲವ ಅವರಿಗೆ ವೈಜ್ಞಾನಿಕ ಪ್ರೋಟೊಗ್ರಫಿ ಮತ್ತು ಸಾಕ್ಷಿಗಳ ಸಂಗ್ರಹಣೆಯ ಪರೀಕ್ಷೆಯಲ್ಲಿ ಸಾಧನೆ ತೋರಿ 2 ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಜ. 2 ಮತ್ತು 3 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಯಲಹಂಕದ ಪೊಲೀಸ್ ತರಭೇತಿ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ಪೊಲೀಸ ಕರ್ತವ್ಯಕೂಟ ಪರೀಕ್ಷಾ ಸ್ಪಧರ್ೆ ಯಲ್ಲಿ ಕೇಂದ್ರ ವಲಯ, ದಕ್ಷಿಣ ವಲಯ, ಪೂರ್ವ ವಲಯ, ಪಶ್ಚಿಮ ವಲಯ, ಉತ್ತರ ವಲಯ ಹಾಗೂ ಈಶಾನ್ಯ ವಲಯದ ಪೊಲೀಸ್ ತಂಡಗಳು ಮತ್ತು ರಾಜ್ಯದ 5 ಕಮಿಷ ನರೇಟ್ ತಂಡಗಳು ಭಾಗವಹಿಸಿದ್ದವು.
ಇದರಲ್ಲಿ ಪಶ್ಚಿಮ ವಲಯ ತಂಡ ಉತ್ತಮ ಸಾಧನೆ ಪ್ರದಶರ್ಿಸಿ ವೀರಾಗ್ರಣಿ ಪ್ರಶಸ್ತಿ ತನ್ನ ದಾಗಿಸಿಕೊಳ್ಳುವದರೊಂದಿಗೆ ಉತ್ತರಪ್ರದೇಶದ ಗೋರಕಪುರದಲ್ಲಿ ಮಾರ್ಚದಲ್ಲಿ ನಡೆಯಲಿರುವ ಅಖಿಲ ಭಾರತ ಪೊಲೀಸ್ ಕರ್ತವ್ಯಕೂಟ ಸ್ಪಧರ್ೆಯಲ್ಲಿ ಕನರ್ಾಟಕದಿಂದ ಈ ತಂಡ ಪ್ರತಿನಿಧಿಸಲಿದೆ. ಪೊಲೀಸ್ ವೃತ್ತಿ ನೈಪುಣ್ಯತೆಯೊಂದಿಗೆ ಕೈಗೊಳ್ಳಬೇಕಾದ ವೈಜ್ಞಾನಿಕ ಕಾನೂನು ತನಿಖೆಯ ವಿವಿಧ ಮಜಲುಗಳು, ವೈಜ್ಞಾನಿಕ ಪ್ರೋಟೊಗ್ರಫಿ, ಕಾನೂನು ಜ್ಞಾನ, ಸಾಕ್ಷಿಗಳ ಸಂಗ್ರಹದಲ್ಲಿ ನೈಪುಣ್ಯತೆ, ಶ್ವಾನ ದಳ, ಬಾಂಬ ನಿಷ್ಕ್ರೀಯ ದಳದ ಸೇರಿದಂತೆ ಹಲವು ಮಹತ್ವದ ಪರೀಕ್ಷೆಯು ಪೋಲಿಸ್ ಕರ್ತವ್ಯಕೂಟದಲ್ಲಿ ನಡೆದಿತ್ತು.