ಕೋಲ್ಕತಾ, ಏ. 4 ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಸಂದೇಶ ಸಾರುವ ಹೊಸ ಸಂಗೀತದ ವಿಡಿಯೋವೊಂದನ್ನು ಬಿಡುಗಡೆಗೊಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ.
ಈ ವಿಡಿಯೋವನ್ನು ಜನರು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಹಾಗೂ ಇನ್ಸ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.
2 ನಿಮಿಷ 30 ಸೆಕೆಂಡ್ ಅವಧಿಯ ಈ ವಿಡಿಯೋ ಬಂಗಾಳದ ಶಾಂತಿ, ಸೌಹಾರ್ದತೆ ಹಾಗೂ ಪ್ರಗತಿಯ ಸಂದೇಶ ಸಾರುತ್ತದೆ.
ಈ ಕುರಿತು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಮಮತಾ, ಮುಂಬರುವ ಲೋಕಸಭಾ ಚುನಾವಣೆಗೆ 'ಮಾ, ಮಾತಿ, ಮಾನುಷ್' ಎಂಬ ಹೊಸ ಸಂಗೀತ ವಿಡಿಯೋ ಬಿಡುಗಡೆಗೊಳಿಸಲು ಸಂತಸವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಕಳೆದ ವಾರ ಮಮತಾ ಬ್ಯಾನಜರ್ಿ ಅವರು, 'ಪ್ರಧಾನ ಮಂತ್ರಿ ಹಿಸಾಬ್ ದೋ' ಎಂಬ ವಿಡಿಯೋ ಸರಣಿಯನ್ನು ಬಿಡುಗಡೆಗೊಳಿಸಿದ್ದರು. ಇದು ಬ್ಯಾನಜರ್ಿ ಅವರ ಆಡಳಿತದಲ್ಲಿ ಪಶ್ಚಿಮ ಬಂಗಾಳ ತ್ವರಿತ ಬೆಳವಣಿಗೆ ಕಂಡಿದೆ ಎಂಬ ಸಂದೇಶವನ್ನು ಒಳಗೊಂಡಿತ್ತು.