ಕೋಲ್ಕತಾ, ಸೆ 18 ಕೇಂದ್ರ ಸರ್ಕಾರ ಕೊಡಮಾಡುವ ಕೃಷಿ ಕರ್ಮಣ್ ಪ್ರಶಸ್ತಿ ಈ ಬಾರಿ ಪಶ್ಚಿಮ ಬಂಗಾಳಕ್ಕೆ ಲಭ್ಯವಾಗಿರುವುದು ಸಂತಸಕರ ಸಂಗತಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ತಿಳಿಸಿದ್ದಾರೆ
ಮುಖ್ಯವಾಗಿ ಮೆಕ್ಕೆಜೋಳ ಉತ್ಪಾದನೆಗಾಗಿ ಕೇಂದ್ರ ಸಕರ್ಾರವು 2017-18ನೇ ಸಾಲಿನ 'ಕೃಷಿ ಕರ್ಮಣ್' ಪ್ರಶಸ್ತಿಯನ್ನು ಪಶ್ಚಿಮ ಬಂಗಾಳಕ್ಕೆ ನೀಡಿದೆ.
ಈ ವಿಷಯವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಮಮತಾ,ಈ ಹಿಂದೆ 2011-12, 2015-16ನೇ ಸಾಲಿನಲ್ಲಿ 'ಕೃಷಿ ಕರ್ಮಣ್' ಪ್ರಶಸ್ತಿಯನ್ನು ಪಶ್ಚಿಮ ಬಂಗಾಳ ಪಡೆದಿತ್ತು. ಈ ಬಾರಿಯೂ ರಾಜ್ಯಕ್ಕೆ ಈ ಪ್ರಶಸ್ತಿ ಲಭ್ಯವಾಗಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ಇದಕ್ಕಾಗಿ ರಾಜ್ಯದ ಎಲ್ಲ ಅಧಿಕಾರಿಗಳಿಗೂ ಅಭಿನಂದನೆ ಉತ್ತಮ ಕೆಲಸ ಮುಂದುವರಿಯಲಿ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.