ಕೋಲ್ಕತಾ, ಡಿ ೧೪ ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಹೌರಾ, ಮುರ್ಷಿದಾಬಾದ್, ಬಿರ್ಭಮ್, ಬುರ್ದ್ವಾನ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರಿದಿವೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುರ್ಷಿದಾಬಾದ್ ಮತ್ತು ಉತ್ತರ ೨೪ ಪರಗಣ ಜಿಲ್ಲೆಗಳಿಂದ ಮತ್ತು ಗ್ರಾಮೀಣ ಹೌರಾದಿಂದಲೂ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ರಸ್ತೆ ಮತ್ತು ರೈಲು ಪ್ರಯಾಣದ ಸ್ಥಗಿತಗೊಂಡಿದೆ. ಉತ್ತರ ಮತ್ತು ದಕ್ಷಿಣ ಬಂಗಾಳವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಒಂದಾದ ರಾಷ್ಟ್ರೀಯ ಹೆದ್ದಾರಿ ೩೪ ಅನ್ನು ಮುರ್ಷಿದಾಬಾದ್‌ನಲ್ಲಿ ಬಂದ್ ಮಾಡಲಾಗಿದೆಹೌರಾದ ಡೊಮ್‌ಜೂರ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ೬ ರಲ್ಲಿ ಪ್ರತಿಭಟನಾಕಾರರು ಟೈರ್‌ಗಳನ್ನು ಸುಟ್ಟು ಹಲವಾರು ವಾಹನಗಳನ್ನು ಹಾನಿಗೊಳಿಸಿದ್ದರಿಂದ ಸಂಚಾರ ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶುಕ್ರವಾರ ಸಹ ಮುರ್ಷಿದಾಬಾದ್‌ನ ಬೆಲ್ಡಂಗಾ ರೈಲ್ವೆ ನಿಲ್ದಾಣ ಸಂಕೀರ್ಣಕ್ಕೆ ಬೆಂಕಿ ಹಚ್ಚಲಾಯಿತು ಮತ್ತು ಅಲ್ಲಿ ನಿಯೋಜಿಸಲಾದ ಆರ್‌ಪಿಎಫ್ ಸಿಬ್ಬಂದಿಯನ್ನು ಥಳಿಸಿದ ಘಟನನೆ ನಡೆದಿದೆ.ಪ್ರತಿಭಟನೆಯ ಮಧ್ಯೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ "ಯಾವುದೇ ಸಂದರ್ಭದಲ್ಲೂ" ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಮತ್ತು ಎನ್‌ಆರ್‌ಸಿಯನ್ನು ಅನುಮತಿಸುವುದಿಲ್ಲ ಎಂದಿರುವಮಮತಾ, ಕೇಂದ್ರ ಸರ್ಕಾರ "ವಿಭಜಕ ನೀತಿಗಳನ್ನು ಅಳವಡಿಸಿಕೊಂಡಿದೆ" ಎಂದು ಆರೋಪಿಸಿದ್ದಾರೆ."ರಾಜ್ಯಗಳ ಭಾವನೆಗಳೊಂದಿಗೆ ಆಟವಾಡಬೇಡಿ. ಅಸ್ಸಾಂ ಉರಿಯುತ್ತಿದೆ. ಜನರು ಪ್ರತಿಭಟಿಸಬೇಕು. ಜೈಲಿಗೆ ಹೋಗಲು ನಾವು ಹೆದರುವುದಿಲ್ಲ. "ನಾನು ಯಾವುದೇ ಕೋಮು ಹಾದಿಯನ್ನು ಹಿಡಿಯುವುದಿಲ್ಲ. ಪ್ರತಿಭಟನೆಯಲ್ಲಿ ನಮ್ಮೊಂದಿಗೆ ಸೇರಲು ಎಲ್ಲರಿಗೂ ಸ್ವಾಗತವಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ