ಅಗ್ನಿ ಶಾಮಕರು ಜೀವ ರಕ್ಷಕರು: ಶ್ರೀಕಾಂತ ದುಂಡಿಗೌಡ್ರ

Firefighters are life savers: Srikanth Dundigowdra

ಶಿಗ್ಗಾವಿ 22: ಅಗ್ನಿ ಶಾಮಕರು ರೈತರು ಶ್ರಮಪಟ್ಟು ದುಡಿದ ಬೆಳೆಗಳಿಗೂ ಬೆಂಕಿ ತಗುಲಿದ ಸಂದರ್ಭಗಳಲ್ಲಿ ಸಹ ಬೆಂಕಿಯನ್ನು ನಂದಿಸಿ ರೈತರ ಮಿತ್ರರಂತೆ ಕೆಲಸವನ್ನು ಮಾಡುತ್ತಾರೆ ಎಂದು ಭಾರತ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.       

ನಗರದ ತಾಲೂಕ ಕ್ರೀಡಾಂಗಣದಲ್ಲಿ  ಭಾರತ ಸೇವಾ ಸಂಸ್ಥೆ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಅಗ್ನಿ ಶಾಮಕ ದಳದ ವತಿಯಿಂದ ಆಯೋಜಿಸಿದ್ದ ಅಗ್ನಿ ಶಾಮಕ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವುದಷ್ಟೇ ಅಲ್ಲದೆ ಭೂಕಂಪ ಭಾರೀ ಮಳೆ ಕಟ್ಟಡ ಕುಸಿತ, ರಸ್ತೆ ಅಪಘಾತಗಳಲ್ಲಿ ತಮ್ಮ ಜೀವದ ಹಂಗನ್ನು ತೊರೆದು ರಕ್ಷಣೆಯನ್ನು ಮಾಡುತ್ತಾರೆ  ಎಂದರು.     

ಅಗ್ನಿ ಶಾಮಕ ದಳದ ಪ್ರಭಾರಿ ಠಾಣಾಧಿಕಾರಿ ಗಣೇಶಗೌಡರ ಮಾತನಾಡಿ ಜನರಿಗೆ ತುರ್ತುಗತಿಯಲ್ಲಿ ಸೇವೆ ಸಲ್ಲಿಸುವುದು ನಮ್ಮ ಮೊದಲ ಆದ್ಯತೆ ಆಗಿರುತ್ತದೆ. ಮನೆ ಕಾರ್ಖಾನೆ ಕಚೇರಿ ಕಾಡು ಮತ್ತು ವಾಹನಗಳಿಗೆ ಹತ್ತಿದ ಬೆಂಕಿಯನ್ನು ಯಾವುದೇ ಪರಿಸ್ಥಿತಿಯಲ್ಲಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತೇವೆ. ಜನರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಅಗ್ನಿ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದರು.     

ಈ ಸಂದರ್ಭದಲ್ಲಿ ಬಸವರಾಜ ಮಾದರ, ಬಾಹುಬಲಿ ಬಾಗಣ್ಣವರ, ಈರಣ್ಣ ಹುಲಿ, ಭರತ ಕಳ್ಳಿಮನಿ, ಬಸವರಾಜ ಹೊಸಪೇಟೆ, ನವೀನ ಸಾಸನೂರ, ವಿಶ್ವನಾಥ ಗಾಣಿಗೇರ, ಶಂಕರ ಧಾರವಾಡ, ದರ್ಶನ ಕರೂರ, ಚೇತನ ಕಲಾಲ್ ಹಾಗೂ ಇತರರಿದ್ದರು.