ಪ್ರತಿಭಟನೆಯ ಸ್ವಾಗತ: ವಿದ್ಯಾರ್ಥಿ ಸಂಘಟನೆ ಎಚ್ಚರಿಕೆWelcome to Resistance: Student Organization Warning
Lokadrshan Daily
1/8/25, 3:43 PM ಪ್ರಕಟಿಸಲಾಗಿದೆ
ಗುವಾಹತಿ, ಜ 8 ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ಪುನರುಚ್ಚರಿಸಿರುವ ನಾರ್ತ್ ಈಸ್ಟ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎನ್ಇಎಸ್ಓ), ಪ್ರಧಾನಿ ನರೇಂದ್ರ ಮೋದಿ ಈ ಭಾಗಕ್ಕೆ ಬಂದರೆ ಅವರಿಗೆ ಪ್ರತಿಭಟನೆ ಸ್ವಾಗತ ನೀಡುವುದಾಗಿ ಹೇಳಿಕೊಂಡಿದೆ. ನೆಸೊ ಸಂಘಟನೆಯಲ್ಲಿ ಸೇರಿರುವ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ಆಫ್ ಅಸ್ಸಾಂ (ಆಸು) ಮುಖಂಡ ಸಮುಜ್ಜಲ್ ಭಟ್ಟಾಚಾರ್ಯ ಈ ಕುರಿತು ಹೇಳಿಕೆ ನೀಡಿ,ನಾವು ಇದೇ 10 ರಿಂದ ಆರಂಭವಾಗುವ ಪರೀಕ್ಷೆಗಳಿಗೆ ಹಾಗೂ ಖೇಲೋ ಇಂಡಿಯಾ ಯುವ ಕ್ರೀಡಾಕೂಟಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂಗೆ ಭೇಟಿ ನೀಡಿದರೆ,ಮಾತ್ರ ಅಹಿಂಸಾತ್ಮಕ ಪ್ರತಿಭಟನೆ ಮಾಡುತ್ತೇವೆ ಶಾಂತಿಯುತ ಗಾಂಧೀಜಿ ಮಾದರಿಯ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ . ಸಿಎಎ ಧರ್ಮ ಧರಿತವಾಗಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು ಧರ್ಮ, ಜಾತಿ ಆಧಾರದಲ್ಲಿ ತಾರತಮ್ಯ ಸಹಿಸಲು ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.