ಕಾವಿ ವಸ್ತ್ರ ಧರಿಸುತ್ತಾರೆ.. ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಾರೆ; ಜೆ ಎಂ ಎಂ ನಾಯಕ ಹೇಮಂತ್ ಸೂರೆನ್ ಸಂಚಲನ ಹೇಳಿಕೆ

ನವದೆಹಲಿ, ಡಿ ೧೯  ಜಾರ್ಖಡ್ ಮುಕ್ತಿ ಮೋರ್ಚಾ ಮುಖ್ಯಸ್ಥ,  ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್, ಬಿಜೆಪಿ ನಾಯಕರ  ವಿರುದ್ಧ   ಸಂಚಲನ  ಹೇಳಿಕೆ ನೀಡಿದ್ದಾರೆ.  ಕಾವಿ ವಸ್ತ್ರ ಧರಿಸುವ  ಕೆಲ  ಬಿಜೆಪಿ ನಾಯಕರು, ಕಾರ್ಯಕರ್ತರು ವಿವಾಹ ಮಾಡಿಕೊಳ್ಳುವುದಿಲ್ಲ... ಆದರೆ, ಅವರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಾರೆ  ಎಂದು ಹೇಮಂತ್ ಸೊರೆನ್ ಆರೋಪಿಸಿದ್ದಾರೆ. ಜಾರ್ಖಂಡ್  ರಾಜ್ಯದ  ಪಕೂರ್ ಪಟ್ಟಣದಲ್ಲಿ ನಡೆದ ಚುನಾವಣಾ   ಸಭೆ  ಉದ್ದೇಶಿಸಿ  ಮಾಡಿದ ಭಾಷಣದ ವೇಳೆ ಹೇಮಂತ್ ಸೊರೆನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶ  ಮುಖ್ಯಮಂತ್ರಿ  ಕಾವಿ  ವಸ್ತ್ರ  ಧರಿಸಿ  ಇಲ್ಲಿ ತಿರುಗುತ್ತಿದ್ದಾರೆ ಎಂದು ಕೇಳಿದ್ದೇನೆ.  ಕಾವಿ  ಧರಿಸುವ  ಬಿಜೆಪಿ ಕಾರ್ಯಕರ್ತರು ಮದುವೆ ಮಾತ್ರ ಮಾಡಿಕೊಳ್ಳುವುದಿಲ್ಲ,   ಆದರೆ ಅತ್ಯಾಚಾರ ಗಳನ್ನು ಮಾತ್ರ ನಡೆಸುತ್ತಾರೆ ಎಂದು ಹೇಮಂತ್ ಆರೋಪಿಸಿದರು. ಉನ್ನಾವೋ, ಹೈದರಾಬಾದ್  ದಿಶ  ಅತ್ಯಾಚಾರ  ಘಟನೆಗಳನ್ನು   ಪ್ರಸ್ತಾಪಿಸಿ   ಅವರು  ಅವರು ಈ ಹೇಳಿಕೆ ನೀಡಿದ್ದಾರೆ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಬಿಜೆಪಿ ವಿಫಲವಾಗಿದ್ದು, ಅತ್ಯಾಚಾರ  ಆರೋಪಿಗಳನ್ನು  ಮಾತ್ರ ರಕ್ಷಿಸುತ್ತಿದೆ ಎಂದು ಹೇಮಂತ್ ಆರೋಪಿಸಿದರು. ಜಾರ್ಖಂಡ್ ವಿಧಾನಸಭಾ  ಚುನಾವಣೆಯಲ್ಲಿ  ಜಾರ್ಖಂಡ್ ಮುಕ್ತಿ ಮೋರ್ಚಾ,ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿ ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ  ಹೇಮಂತ್  ಸೊರೆನ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.