ವೆಲ್ಲಿಂಗ್ಟನ್, ಫೆ 24, ನ್ಯೂಜಿಲೆಂಡ್ ವಿರುದ್ಧ 10 ವಿಕೆಟ್ಗಳ ಸೋಲು ಅನುಭವಿಸಿದ ಭಾರತ ತಂಡದ ನೀರಸ ಪ್ರದರ್ಶನವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ.ಇಲ್ಲಿನ ಬೇಸಿನ್ ರಿವರ್ ಅಂಗಳದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಪಡೆದಿದೆ. "ಈ ಪಂದ್ಯದಲ್ಲಿ ನಾವು ಸ್ಪರ್ಧಾತ್ಮಕ ಕ್ರಿಕೆಟ್ ಆಡುವಲ್ಲಿ ವಿಫಲವಾಗಿದ್ದೇವೆ. ಈ ಹಿಂದೆ ಒಳ್ಳೆಯ ಕ್ರಿಕೆಟ್ ಆಡಿರುವುದೂ ನಮಗೆ ಗೊತ್ತಿದೆ. ನಾವು ಪಂದ್ಯ ಸೋತರೂ ಆಟದಲ್ಲಿ ನಮ್ಮನ್ನು ತೊಡಗಿಸಿಕೊಂಡಿರಬೇಕು,'' ಎಂದು ಕೊಹ್ಲಿ ಹೇಳಿದರು.ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಭಾರತವನ್ನು ಪ್ರಥಮ ಇನಿಂಗ್ಸ್ನಲ್ಲಿ 165 ರನ್ ಗಳಿಗೆ ಆಲೌಟ್ ಮಾಡಿತು.
ಅಲ್ಲದೆ, ಆತಿಥೇಯ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳ ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದರು. ಇದರ ಫಲವಾಗಿ ಕಿವೀಸ್ 183 ರನ್ ಮುನ್ನಡೆ ಗಳಿಸಲು ಸಾಧ್ಯವಾಗಿತ್ತು. ನಂತರ, ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ಕೇವಲ 191 ರನ್ಗಳಿಗೆ ಸರ್ವಪತನವಾಯಿತು. ಭಾರತ ನೀಡಿದ ಕೇವಲ ಒಂಬತ್ತು ರನ್ಗಳನ್ನು ನ್ಯೂಜಿಲೆಂಡ್ ವಿಕೆಟ್ ನಷ್ಟವಿಲ್ಲದೆ ಮುಟ್ಟಿತು. ಆ ಮೂಲಕ 100ನೇ ಟಸ್ಟ್ ಐತಿಹಾಸಿಕ ಜಯವನ್ನು ಆತಿಥೇಯರು ಸಾಧಿಸಿದರು."ಮೊದಲನೇ ಇನಿಂಗ್ಸ್ನಲ್ಲಿ ಅತಿ ಕಡಿಮೆ ಮೊತ್ತವನ್ನು ನಾವು ಕಲೆ ಹಾಕಿದ್ದು ಪಂದ್ಯದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತು ಎಂದು ಹೇಳಿದ ಕೊಹ್ಲಿ," ಈ ಪಂದ್ಯದಲ್ಲಿ ನಾವು ಗುಣಮಟ್ಟವನ್ನು ಕಾಯ್ದುಕೊಂಡಿಲ್ಲ.
ಹಾಗಾಗಿ, ಸೋಲನ್ನು ಒಪ್ಪಿಕೊಳ್ಳಲು ನಮಗೆ ಯಾವುದೇ ಮುಜುಗರವಿಲ್ಲ. ಸೋಲನ್ನು ಸ್ವೀಕರಿಸಿದ್ದು, ಮುಂದಿನ ಪಂದ್ಯದಲ್ಲಿ ಪೂರ್ವ ತಯಾರಿ ಹಾಗೂ ಅತ್ಯುತ್ತಮ ಸ್ಪರ್ಧಾತ್ಕ ಮನೋಭಾವದೊಂದಿಗೆ ಕಣಕ್ಕೆ ಇಳಿಯುತ್ತೇವೆ,'' ಎಂದು ಪಂದ್ಯದ ಸೋಲಿನ ಬಳಿಕ ಕೊಹ್ಲಿ ಹೇಳಿದರು."ನಾವು ಚೆನ್ನಾಗಿ ಆಡಲಿಲ್ಲ ಎಂದು ನಮಗೆ ತಿಳಿದಿದೆ. ಆದರೆ, ಜನರು ಇದರಿಂದ ದೊಡ್ಡದನ್ನು ಮಾಡಲು ಬಯಸಿದರೆ, ಅದರಿಂದ ಒಂದು ಪರ್ವತವನ್ನು ಮಾಡಿಕೊಳ್ಳಲಿ, ನಾವು ಹಾಗೆ ಎಂದಿಗೂ ಯೋಚನೆ ಮಾಡುವುದಿಲ್ಲ,'' ಎಂದು ತಿಳಿಸಿದರು.ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಮೊದಲ ಸೋಲು ಇದಾಯಿತು. ಆದರೂ, ಅಂಕಪಟ್ಟಿಯಲ್ಲಿ 360 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಗೆಲುವಿನೊಂದಿಗೆ ನ್ಯೂಜಿಲೆಂಡ್ ಐದನೇ ಸ್ಥಾನಕ್ಕೇರಿದೆ.ಮುಂದಿನ ಶನಿವಾರ ಕ್ರೈಸ್ಟ್ಚರ್ಚ್ನಲ್ಲಿ ಉಭಯ ತಂಡಗಳು ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.