ಬೆಂಗಳೂರು, ಆ 7 ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಪರೂಪದ ರಾಜಕಾರಣಿ. ಅವರು ಬಿಜೆಪಿಯಲ್ಲಿ ಇದ್ದರೂ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಇಂತಹ ನಾಯಕರನ್ನು ಬಿಜೆಪಿಯಲ್ಲಿ ಇನ್ನು ನೋಡಲು ಸಾಧ್ಯವಿಲ್ಲ, ಅವರು ಎಲ್ಲರಿಗಿಂತ ವಿಭಿನ್ನವಾಗಿದ್ದರು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಏನಾದರೂ ಸಲಹೆ ಕೊಟ್ಟರೆ ಸುಷ್ಮಾ ಅವರು ಅದನ್ನು ತುಂಬು ಮನಸ್ಸಿನಿಂದ ಸ್ವೀಕರಿಸುತ್ತಿದ್ದರು. ಯುಪಿಎ ಅವಧಿಯಲ್ಲಿ ಅವರು ವಿರೋಧ ಪಕ್ಷದ ನಾಯಕಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಸಕರ್ಾರದ ಗಮನ ಸೆಳೆದು ಯಶಸ್ವಿ ನಾಯಕಿಯಾಗಿದ್ದರು. ಇಂತಹವರನ್ನು ನಾವು ರಾಜಕಾರಣದಲ್ಲಿ ಮತ್ತೆ ಕಾಣಲು ಸಾಧ್ಯವಿಲ್ಲ ಎಂದು ಕಂಬಿನಿ ಮಿಡಿದಿದ್ದಾರೆ.
ನನಗಿಂತ ಹತ್ತು ವರ್ಷ ಚಿಕ್ಕವರಾಗಿದ್ದ ಸುಷ್ಮಾ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಇದರಿಂದಲೇ ಅವರು ಇಹಲೋಕ ತ್ಯಜಿಸಿದ್ದಾರೆ. ಆ ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಖರ್ಗೆ ಪ್ರಾರ್ಥಿಸಿದ್ದಾರೆ.