ಗದಗ 2: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಡಿಸೆಂಬರ್ 3 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ 11 - ನಿಸರ್ಗ ಬಡಾವಣೆ, ರಿಂಗ ರೋಡ, ಶಿವ ಬಸವನಗರ, ಹನುಮಂತ ದೇವರ ಗುಡಿ, ಕಾಶಿ ವಿಶ್ವನಾಥ ಗುಡಿ, ಗಾಣಿಗೇರ ಭವನ, ನಾಗಪ್ಪನ ಕಟ್ಟಿ ಉಳಿದ ಕೆಲವು ಭಾಗಗಳು. ವಾರ್ಡ್ 29 - ಶಿಕ್ಷಕರ ಬಡಾವಣೆ ಉಳಿದ ಕೆಲವು ಭಾಗಗಳು. ವಾರ್ಡ್ 30, 34 - ವಡ್ಡರಗೇರಿ, 46 ಪ್ಲಾಟ, ಕೊರವರ ಓಣಿ, ಮೂರು ಶಿಳ್ಳಿನವಕಾರ, ಡಿಪೋ ಹಿಂದಿನ ಭಾಗ, ಶಿವಾನಂದ ಗಾರ್ಡನ ಉಳಿದ ಕೆಲವು ಭಾಗಗಳು. ವಾರ್ಡ್ 6 - ಕೂಟಗಿ ಮಾಸ್ತರ ಲೈನ, ಹನುಮಂತ ದೇವರ ಗುಡಿ ಲೈನ, ಅರವಿಯವರ ಲೈನ ಉಳಿದ ಕೆಲವು ಭಾಗಗಳು. ವಾರ್ಡ್ 20, 23, 25 - ಜಂತ್ಲಿಯವರ ಲೈನ, ಕುಂಬಾರ ಓಣಿ, ದ್ಯಾಮವ್ವನ ಕಟ್ಟಿ, ಹನುಮಾನ ಗರಡಿ, ವಿಭೂತಿ ಓಣಿ, ದ್ರೌಪತಿ ಬಾಯಿ, ಕೆರೆಕಲಮಟ್ಟಿ, ಸಿ ಟಿ ಹಾಲ ಭಾಗ 1,2. ವಾರ್ಡ್ 4 - ಪಣವಿ ಪ್ಲಾಟ ಪೂರ್ತಿ ಭಾಗಗಳು. ವಾರ್ಡ್ 21, 22 - ವಿಜಯನಗರ ಶಾಲೆ, ಕಮತರ ಪ್ಲಾಟ, ಶಿಗ್ಗಾವಿ ಲೇಓಟ, ಕುರುಗಲ ಲೇಓಟ, ವಾಲ್ಮೀಕಿ ಭವನ, ಟವರ ಕಂಬ ಉಳಿದ ಕೆಲವು ಭಾಗಗಳು.
ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿಂದಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.