14 ರಂದು ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ

Water supply in various parts of Gadag Betageri city

ಗದಗ ಫೆಬ್ರುವರಿ 13: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಫೆಬ್ರುವರಿ 14  ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. 

ಸ್ಥಳಗಳ ವಿವರ: ವಾರ್ಡ್‌ 34, 35 - ಹುಡ್ಕೋ 1, 2, 3, ನೇ ಕ್ರಾಸಗಳು, ಹನುಮಂತ ದೇವರು ಗುಡಿ, ಈಶ್ವರ ಗುಡಿ, ಇ ಡಬ್ಲ್ಯೂ ಎಸ ಉಳಿದ ಕೆಲವು ಭಾಗಗಳು. ವಾರ್ಡ್‌ 22 - ಗಂಗೆಮಡಿ, ಅಪಾರ್ಟಮೆಂಟ, ದೊಡ್ಡಮಸೂತಿ ಭಾಗಗಳು. ವಾರ್ಡ್‌ 33 - ಜಾಕಿರ ಹುಸೈನ ಕಾಲೋನಿ, ಕರಿಗೌಡ್ರ ಲೈನ, ಪಂಚಮುಖಿ ದೇವರ ಗುಡಿ, ಪಿಡ್ಡಿಯವರ ಲೈನ, ಮುಳಗುಂದ ರಸ್ತೆ ಉಳಿದ ಕೆಲವು ಭಾಗಗಳು. ವಾರ್ಡ್‌ 28 - ದೇವಗಿರಿ ಸರ ಲೈನ, ಸಂತೋಷ ಕಿರಾಣಿ ಸ್ಟೋರ, ಅಪಾರ್ಟಮೆಂಟ, ಕಟ್ಟಿಯವರ ಲೈನ, ಅಬ್ಬಿಗೇರಿ ಲೈನ, ಗವಾಯಿಗಳ ಆಶ್ರಮದ ಮುಂದಿನ ಭಾಗ, ಸೊಲ್ಲಾಪಟ್ಟಿ ಲೈನ, ಕೃಷ್ಣ ಟ್ಯೂಷನ ಲೈನ ಉಳಿದ ಕೆಲವು ಭಾಗಗಳು. ವಾರ್ಡ್‌ 6, 10 - ಸಿಹಿ ನೀರಿನ ಬಾವಿ ಸೆಟ, ಒಕ್ಕಲಗೇರಿ, ಕಿ, ಗಾರ್ಗಿಪೇಟೆ, ಚೆನ್ನಬಸಪ್ಪನ ಗುಡಿ ಉಳಿದ ಕೆಲವು ಭಾಗಗಳು. ವಾರ್ಡ್‌ 29 - ಪರಸುರವರ ಲೈನ, ಪಾಪಡೆರವರ ಲೈನ, ಬನ್ನಿ ಕಟ್ಟಿ ಲೈನ ಉಳಿದ ಕೆಲವು ಭಾಗಗಳು. ವಾರ್ಡ್‌ 30, 27 - ಸಂಭಾಪುರ ರಸ್ತೆ, ಪೊಲೀಸ ಕ್ವಾಟ್ರಸ, ಮುತ್ತಿನ ಪೆಂಡಿಯವರ ಲೈನ, ಎಸ ಪಿ ಆಫೀಸ, ರೋಣದವರ ಲೈನ, ಕೇಶವ ನಗರ, ಪುಟ್ಟರಾಜನಗರ, ಸಂಕಣ್ಣವರ ಲೇಓಟ ಟಿ ವಿ ಎಸ ಶೋರೂಮ ಉಳಿದ ಕೆಲವು ಭಾಗಗಳು. 

ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿಂದಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಮತ್ತು ತಮ್ಮ ಬಾಕಿ ಇರುವ ನೀರಿನ ಕರವನ್ನು ನಗರಸಭೆಗೆ ಪಾವತಿಸಬೇಕೆಂದು ಎಂದು  ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.