ಲೋಕದರ್ಶನ ವರದಿ
ಯಲಬುರ್ಗಾ 19: ಪ್ರತಿಯೊಂದು ಜೀವಿಯೂ ಜೀವಿಸಲು ಅಗತ್ಯವಾಗಿ ಬೇಕಾಗಿರುವದು ನೀರು ಅದನ್ನು ಸಂರಕ್ಷಿಸುವ ಕಾರ್ಯವು ಅತ್ಯಂತ ಮಹತ್ವದ್ದಾಗಿದೆ ಎಂದು ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಷ,ಬ್ರ, ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಗಳು ಹೇಳಿದರು.
ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಹಾಗೂ ಅಭಿವೃದ್ಧಿ ಪಡಿಸಿದ ಕೆರೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಆಶಿರ್ವಚನ ನೀಡಿದರು.
ನಮ್ಮದು ಬಯಲು ಸಿಮೆ ಹಾಗೂ ಕಪ್ಪು ಮಣ್ಣಿನ ಪ್ರದೇಶವಾಗಿದ್ದು ನೀರು ಬಹಳ ದಿನ ಭೂಮಿಯಲ್ಲಿ ಉಳಿಯುವದಿಲ್ಲಾ ಅದನ್ನು ಅರಿತುಕೊಂಡು ನೀರನ್ನು ಶೇಖರಿಸಿಡುವದು ತುಂಬಾ ಅವಶ್ಯಕವಾಗಿದೆ ಇಂತಹ ಒಂದು ಮಹತ್ತರ ಕಾರ್ಯವನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಡಿರುವದು ತುಂಬಾ ಉತ್ತಮ ಕೆಲಸವಾಗಿದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಪ್ರಾದೇಶಿಕ ನಿದರ್ೆಶಕ ಪುರುಷೋತ್ತಮ ಮಾತನಾಡಿ ನಮ್ಮ ಯೋಜನೆಯ ಉದ್ದೇಶ ಪ್ರತಿಯೊಬ್ಬರಿಗೂ ನೀರಿನ ಕೊರತೆಯಾಗದಂತೆ ನೊಡಿಕೊಳ್ಳುವದಾಗಿದೆ, ನಮ್ಮ ಯೋಜನೆಯಿಂದ ಈ ಭಾಗದಲ್ಲಿ 18 ಕೆರೆಗಳನ್ನ ಅಭಿವೃದ್ಧಿ ಪಡಿಸಲಾಗಿದೆ, ಒಟ್ಟು ನಮ್ಮ ರಾಜ್ಯದಲ್ಲಿ 187 ಕೆರೆಗಳನ್ನ ಅಭಿವೃದ್ಧಿ ಪಡಿಸಿದ್ದು 14 ಕೋಟಿ, 17 ಲಕ್ಷ ರೂ,ಗಳನ್ನು ಖಚರ್ು ಮಾಡಲಾಗಿದೆ ಹಾಗೂ ಸರಕಾರದ ಕೆರೆ ಸಂಜೀವಿನಿ ಯೋಜನೆಯಿಂದ 87 ಕೆರೆಗಳನ್ನ ಅಭಿವೃದ್ಧಿ ಪಡಿಸಲಾಗಿದೆ ಅದಕ್ಕಾಗಿ 8ಕೋಟಿ ರೂ ಖಚರ್ು ಮಾಡಲಾಗಿದೆ ಅದರಂತೆ ಈ ಬಾರಿ ಉತ್ತಮ ಮಳೆಯಾಗಿದ್ದು ನಾವು ಅಭಿವೃದ್ಧಿ ಪಡಿಸಲಾದ ಎಲ್ಲಾ ಕೆರೆಗಳು ನೀರಿನಿಂದ ತುಂಬಿದ್ದು ಸಂತಸವನ್ನುಂಟು ಮಾಡಿದೆ ಇದರ ಜೊತೆಗೆ ಮಹಿಳೆಯರ ಸ್ವಾವಲಂಭನೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಎಲ್ಲವೂ ಯಶಸ್ವಿಯಾಗಿವೆ ಎಂದರು.
ಶಾಸಕ ಹಾಲಪ್ಪ ಆಚಾರ, ಎಪಿಎಮ್ಸಿ ಅದ್ಯಕ್ಷ ಬಸವರಾಜ ಗಡಾದ, ಗುರುಶಾಂತವೀರ ಮಹಾಸ್ವಾಮೀಗಳು ಮೆಲುಗದ್ದುಗೆಮಠ, ಚಿಕ್ಕಮ್ಯಾಗೇರಿ, ಇಟಗಿ, ಮಹಾದೇವದೇವರು ಅನ್ನದಾನೇಶ್ವರ ಸಂಸ್ಥಾನ ಮಠ ಕುಕನೂರು, ಜಿಪಂ ಸದಸ್ಯೆ ಗಂಗಮ್ಮ ಈಶಣ್ಣ ಗುಳಗಣ್ಣನವರ, ತಾಪಂ ಸದಸ್ಯೆ ದೇವಮ್ಮ ನಾಗೋಜಿ, ಸಂಗನಾಳ ಗ್ರಾಪಂ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷೆ ಸೋಮವ್ವ, ಸದಸ್ಯರಾದ ಗೌರಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರಳಿಧರ ಎಚ್ ಎಲ್, ತಾಲೂಕ ಸಂಯೋಜಕ ರಾಜೇಶ, ಸಿಬ್ಬಂದಿಯಾದ ನಿಂಗಪ್ಪ, ಮುಖಂಡರಾದ ಶರಣಪ್ಪ ಗಟ್ಟೆಪ್ಪನವರ, ಶಾರದಾ ಸಂಗಪ್ಪ ಗಡಾದ, ಶೇಖರ ಗುರಾಣಿ, ಯಲ್ಲಪ್ಪ ಅಡವಿಹಳ್ಳಿ, ಪಕ್ಕೀರಪ್ಪ ತಳವಾರ, ಶರಣಗೌಡ್ರ ಮರಿಗೌಡ್ರ, ಸೇರಿದಂತೆ ಅನೇಕರು ಹಾಜರಿದ್ದರು.