ಬೆಳಗಾವಿ, 14: ನೂತನ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿಯವರು ವಿಧಾಸೌಧದ ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಖಾತೆಯ ಜವಾಬ್ದಾರಿ ವಹಿಸಿಕೊಂಡರು.
ಶುಕ್ರವಾರ(ಫೆ.14) ಖಾತೆಯ ಜವಾಬ್ದಾರಿ ಬಹಿಸಿಕೊಂಡು ಮಾಧ್ಯಮ ಹೇಳಿಕೆ ನೀಡಿರವ ಅವರು ಕನರ್ಾಟಕ ರಾಜ್ಯದ ಜಲಸಂಪನ್ಮೂಲ ಸಚಿವನಾಗಿ ಕರ್ತವ್ಯವನ್ನು ಸ್ವೀಕರಿಸಿದ್ದೇನೆ. ನನಗೆ ಈ ಜವಾಬ್ದಾರಿಯುತ ಇಲಾಖೆಯ ಸಚಿವರನ್ನಾಗಿ ನೇಮಕ ಮಾಡಿದ ಮುಖ್ಯಮಂತ್ರಿಗಳನ್ನು ನಾನು ಅಭಿನಂದಿಸುತ್ತೇನೆ
ಕನರ್ಾಟಕ ರಾಜ್ಯದ ಹಲವು ಜ್ವಲಂತ ನೀರಾವರಿ ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾವೇರಿ , ಕೃಷ್ಣ , ಮಹದಾಯಿ ಸೇರಿದಂತೆ ಎಲ್ಲಾ ನದಿ ನೀರು ಹಂಚಿಕೆ ವಿಚಾರದಲ್ಲಿ ಕನರ್ಾಟಕಕ್ಕೆ ನ್ಯಾಯ ಒದಗಿಸಿ, ರಾಜ್ಯದ ಜನತೆಗೆ ವಿಶೇಷವಾಗಿ ರೈತರಿಗೆ ಅನುಕೂಲವಾಗುವಂತೆ ನಾನು ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ ಎಂದು
ತಿಳಿಸಿದ್ದಾರೆ.
ಒಂದೆಡೆ ನೀರಾವರಿ ಯೋಜನೆಗಳಿಗೆ ಆದ್ಯತೆ, ಮತ್ತೊಂದೆಡೆ ಸವರ್ೋಚ್ಚ ನ್ಯಾಯಾಲಯದಲ್ಲಿರುವ ನೀರು ಹಂಚಿಕೆ ಪ್ರಕರಣಗಳತ್ತ ವಿಶೇಷ ಗಮನ ಹರಿಸುತ್ತೇನೆ. ಜನತೆಗೆ ಮತ್ತು ರಾಜ್ಯದ ಭೂಮಿಗೆ ನೀರುಣಿಸುವುದು ಮತ್ತು ರಾಜ್ಯದ ಜನರ ಕಣ್ಣೀರು ಒರೆಸುವುದು ಎರಡೂ ನನ್ನ ಕರ್ತವ್ಯ ಮತ್ತು ಜವಾಬ್ದಾರಿ ಎಂದು
ಭಾವಿಸಿದ್ದೇನೆ.
ಜಲಸಂಪನ್ಮೂಲ ಖಾತೆಯನ್ನು ವಹಿಸಿಕೊಂಡ ಕ್ಷಣದಿಂದ ರಾಜಕೀಯ ಮಾತುಗಳಿಂದ ನಾನು - ದೂರವಿದ್ದು, ಕರ್ತವ್ಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಕೊಳ್ಳುತ್ತೇನೆ. ರಾಜ್ಯದ ಅತ್ಯಮೂಲ್ಯ ಜಲಸಂಪತ್ತನ್ನು ರಕ್ಷಿಸುವಲ್ಲಿ ಸರಕಾರದೊಂದಿಗೆ ಸಹಕರಿಸಿ ಎಂದು ಜನತೆಯಲ್ಲಿ - ಮನವಿ ಮಾಡುತ್ತೇನೆ ಎಂದು ಜಲಸಂಪನ್ಮೂಲರಾದ ರಮೇಶ್ ಜಾರಕಿಹೊಳಿ ಅವರು ಹೇಳಿದರು.