ಅಹಮದಾಬಾದ್, ಅ.17: ಏಳನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿ ರೋಚಕತೆ ಹುಟ್ಟಿಸಿದ್ದು, ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಕಾಯ್ದುಕೊಂಡ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಕಾದಾಟ ನಡೆಸಲಿವೆ. ಈ ಬಾರಿ ಬೆಂಗಾಲ್ ವಾರಿಯರ್ಸ್ ಹಾಗೂ ದಬಾಂಗ್ ದೆಹಲಿ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಫೈಟ್ ನಡೆಸಲಿದ್ದು ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿದೆ. ಈ ಎರಡೂ ತಂಡಗಳು ಇದೇ ಮೊದಲ ಬಾರಿಗೆ ಟೂರ್ನಿಯ ಫೈನಲ್ ಗೆ ಅರ್ಹತೆ ಪಡೆದಿವೆ. ಈ ಮೂಲಕ ಈ ಬಾರಿ ಮತ್ತೊಂದು ಪಂದ್ಯ ಚಾಂಪಿಯನ್ ಪಟ್ಟ ಅಲಂಕರಿಸಲಿದೆ. ಬುಧವಾರ ನಡೆದ ಮೊದಲ ಸೆಮಿಫೈನಲ್ಸ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 38-44 ರಿಂದ ಮಣಿಸಿದ ದಬಾಂಗ್ ದೆಹಲಿ ಅಂತಿಮ ಕಾದಟಕ್ಕೆ ಅರ್ಹತೆ ಪಡೆಯಿತು. ಇನ್ನೊಂದು ಪಂದ್ಯದಲ್ಲಿ ಬೆಂಗಾಲ್ 37-35 ರಿಂದ ಯು-ಮುಂಬಾ ತಂಡವನ್ನು ಮಣಿಸಿತು. ಬೆಂಗಾಲ್ ವಾರಿಯರ್ಸ್ 2016, 2017, 2018ರಲ್ಲಿ ನಾಕೌಟ್ ಹಂತ ಪ್ರವೇಶಿಸಿತ್ತು. ದಬಾಂಗ್ ಸತತ ಎರಡು ಬಾರಿ ನಾಕೌಟ್ ಪ್ರವೇಶಿಸಿದೆ. ಉಭಯ ತಂಡಗಳ ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿದ್ದು, ಯಾವ ತಂಡ ಪ್ರೊ ಕಬಡ್ಡಿ ಟೂರ್ನಿಯ ಚಾಂಪಿಯನ್ ಎಂಬ ಹಣೆ ಪಟ್ಟೆ ತನ್ನದಾಗಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.