ನವದೆಹಲಿ, ಅ 5: ದೇಶದ ಸಶಸ್ತ್ರಪಡೆಯ ಯೋಧರ ಬಹುದಿನಗಳ ಬೇಡಿಕೆ ಈಡೇರಿದೆ. ಅರೆ ಸೈನಿಕ ಪಡೆಯ ಸೈನಿಕರಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ ದೇಶೀಯವಾಗಿ ಅಭಿವೃದ್ಧಿಗೊಳಿಸಲಾದ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಮನಾದ ಬುಲೆಟ್ ಪ್ರೂಫ್ ಜಾಕೆಟ್ ಗಳು ಲಭ್ಯವಾಗಲಿವೆ.
ಇವುಗಳನನ್ನು 'ಮೇಕ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ ಭಾರತದಲ್ಲೇ ತಯಾರಿಸಲಾಗಿದೆ.
ಇಂಡಿಯನ್ ಸ್ಟ್ಯಾಂಡಡ್ರ್ಸ ಮಂಡಳಿ (ಬಿ.ಐ.ಎಸ್.) 2018ರಲ್ಲಿ ಸಿದ್ಧಪಡಿಸಿ ಸೂಚಿಸಿದ್ದ ಮಾನದಂಡಗಳಿಗೆ ಅನುಗುಣವಾಗಿ ತಯಾರಿಸಲಾಗಿದೆ.
ನೀತಿ ಆಯೋಗ ಮತ್ತು ಗೃಹ ಸಚಿವಾಲಯದ ನಿರ್ದೇಶನಗಳಿಗೆ ಅನುಸಾರವಾಗಿ ಬಿ.ಐ.ಎಸ್. ಈ ಮಾನದಂಡಗಳನ್ನು ನಿಗದಿಪಡಿಸಲಾಗಿತ್ತು .ಈ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ತಯಾರಿಸುವ ಮೂಲಕ ಭಾರತ ಸಹ ಬುಲೆಟ್ ಪ್ರೂಫ್ ಜಾಕೆಟ್ ಗಳ ತಯಾರಿಯಲ್ಲಿ ಹೆಸರು ಮಾಡಿರುವ ಹಲವು ರಾಷ್ಟ್ರಗಳ ಸಾಲಿಗೆ ಭಾರತ ಸಹ ಸೇರಿಕೊಂಡಿದೆ. ಇನ್ನು ಈ ಜಾಕೆಟ್ ಗಳ ಬೆಲೆ 70 ಸಾವಿರದಿಂದ 80 ಸಾವಿರವಾಗಿದ್ದು, ಇದು ಹಿಂದಿನ ಬೆಲೆಗಿಂತಲೂ ಬಹಳ ಕಡಿಮೆ ಮತ್ತು ಮೇಲಾಗಿ ಯೋಧರ ಅವಶ್ಯಕತೆ ಪೂರೈಸುವ ಉತ್ತಮಗುಣಮಟ್ಟ ಹೊಂದಿದೆ ಎಂದು ಮೂಲಗಳು ತಿಳಿಸಿವೆ.