ಮಹಿಳೆಯರು ಸ್ವಉದ್ಯೋಗ ಪಡೆಯುವ ಮೂಲಕ ಆರ್ಥಿಕವಾಗಿ ಸಬಲರು: ಬಿ.ನಾರಾಯಣಪ್ಪ

ಕಂಪ್ಲಿ 28: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡವರಿಗೆ ಮತ್ತು ಹಿಂದುಳಿದ ಕುಟುಂಬಗಳು ಸ್ವಉದ್ಯೋಗ ಪಡೆಯುವ ಮೂಲಕ ಆರ್ಥಿಕವಾಗಿ ಸಬಲರಾಗಿದ್ದಾರೆ ರಾಮಸಾಗರ ಗ್ರಾಪಂ ಮಾಜಿ ಅಧ್ಯಕ್ಷ ಬಿ.ನಾರಾಯಣಪ್ಪ ಹೇಳಿದರು ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ಶನಿವಾರ ಹಮ್ಮಿಕೊಂಡ ತಾಲೂಕು ಮಟ್ಟದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಬಡ ಮಕ್ಕಳಶಿಕ್ಷಣ ರೈತರಿಗೆಭತ್ತ ಶಾಲೆಗಳಿಗೆ ಆತಿಥಿ ಶಿಕ್ಷಕರು ಮತ್ತು ಮಹಿಳೆಯರಿಗೆ ಸ್ವಸಹಾಯ ಗುಂಪುಗಳಿಗೆ ಸಾಲ ಸ್ವಉದ್ಯೋಗ ಪಡೆಯುವ ಮೂಲಕ ಅರ್ಥಿಕ ಸಹಾಯ ನಿಸ್ವಾರ್ಥ ಸಮಾಜ ಸೇವೆ ಮಾಡುವಲ್ಲಿ ಧರ್ಮಸ್ಥಳ ಸಂಸ್ಥೆ ಮುಂಚೂಣಿಯಲ್ಲಿದೆ. 

ಮಹಿಳೆ ಕೇವಲ ಗೃಹಿಣಿಯಾಗದೆ, ಸ್ವಉದ್ಯೋಗ ಮೂಲಕ ಆರ್ಥಿಕ ಸ್ವಾವಲಂಬನೆಯೊಂದಿಗೆ, ಮಿತವ್ಯಯ ಸಾಧಿಸುವ ಮೂಲಕ ಆರ್ಥಿಕ ಸಾಕ್ಷರಳಾಗಬೇಕಿದೆ  ಮಹಿಳೆ ಸೂಕ್ತ ತರಬೇತಿ ಪಡೆದು ಸ್ವಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಸಬಲತೆ ಸಾಧಿಸಬೇಕು. ಎಂದರು ಎಸ್‌ಕೆಡಿಆರ್‌ಡಿವೈ ಬಿ.ಸಿ.ಟ್ರಸ್ಟ್‌ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಮಾತನಾಡಿ, ತಾಲೂಕಿನ 33 ಗ್ರಾಮಗಳಲ್ಲಿ 2611ಸ್ವಸಹಾಯ ಸಂಘಗಳಿದ್ದು, 22,497ಸದಸ್ಯರು ಪಾಲ್ಗೊಂಡು 10.53ಕೋಟಿ ರೂಪಾಯಿಗಳ ಉಳಿತಾಯ ಸಾಧಿಸಿದ್ದಾರೆ. ಕೃಷಿ, ಕೃಷಿಕರ ಅಭಿವೃದ್ಧಿಗಾಗಿ 60ರೈತರು 600ಎಕರೆಗೆ ಯಂತ್ರಶ್ರೀ ಯೋಜನೆಯನ್ನು ಬಳಸಿಕೊಂಡಿದ್ದಾರೆ.  

ಪರಿಸರ ಜಾಗೃತಿ, ವ್ಯಸನ ಮುಕ್ತತೆ, ಶಿಕ್ಷಣಾಭಿವೃದ್ಧಿ ಸೇರಿ ನಾನಾ ಜನಪರ ಯೋಜನೆಗಳನ್ನು ಹಮ್ಮಿಕೊಂಡು ಯಶಸ್ಸುಗೊಳಿಸಿದೆ ಎಂದರು.ಪಾಠಶಾಲೆ ಮಾಜಿ ಅಧ್ಯಕ್ಷ ಎಸ್‌.ಎಸ್‌.ಎಂ.ಚನ್ನಯ್ಯಸ್ವಾಮಿ ಅಧ್ಯಕ್ಷತೆವಹಿಸಿದ್ದರು. ಪ್ರಮುಖರಾದ ಎಚ್‌.ಕೆ.ಗಿರಡ್ಡಿ, ಕೆ.ಎಂ.ಹೇಮಯ್ಯಸ್ವಾಮಿ, ವಾಗೀಶ್, ಎಂ.ಸುಧೀರ್, ಡಾ.ವೆಂಕಟೇಶ, ಇ.ಸಚಿನ್, ಷಣ್ಮುಕಪ್ಪ, ಉಮಾಮಹೇಶ್ವರಿ, ಎಂ.ಎ.ಹಾಲಪ್ಪ, ಸಂಜುಕುಮಾರ್, ರೇಖಾ, ಮೇಲ್ವಿಚಾರಕರು, ಒಕ್ಕೂಟದ ಪದಾಧಿಕಾರಿಗಳಿದ್ದರು.