ಲೋಕದರ್ಶನ ವರದಿ
ಮುದ್ದೇಬಿಹಾಳ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ಆಲಮಟ್ಟಿ ಆಣೆಕಟ್ಟೆಯಿಂದ ಮಾರ್ಚ 31ರವರೆಗೂ ನೀರು ಹರಿಸಬೇಕು ಮತ್ತು ಎಲ್ಲ ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿ ಸಕರ್ಾರದ ಗಮನ ಸೆಳೆಯಲು ನ.9 ರಿಂದ ರೈತ ಮುಖಂಡರು ಮತ್ತು ಸಂತ್ರಸ್ತ ರೈತರೊಂದಿಗೆ ಮುದ್ದೇಬಿಹಾಳದಿಂದ ಕೆಬಿಜೆಎನ್ನೆಲ್ ವ್ಯವಸ್ಥಾಪಕ ನಿದರ್ೇಶಕರ ಕಚೇರಿ ಇರುವ ಆಲಮಟ್ಟಿ ಆಣೆಕಟ್ಟೆವರೆಗೆ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನ.10 ರಂದು ಪಾದಯಾತ್ರೆ ಅಂತ್ಯಗೊಂಡ ಮೇಲೆ ಅಂದೇ ಬೆಳಿಗ್ಗೆ 11ಕ್ಕೆ ಆಲಮಟ್ಟಿಯಲ್ಲಿ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾರ್ಚ ಅಂತ್ಯದವರೆಗೂ ನೀರು ಹರಿಸುವ ಕುರಿತು ಘೋಷಣೆ ಹೊರಡಿಸುವಂತೆ ಒತ್ತಾಯಿಸಲಾಗುತ್ತದೆ. ರೈತರ ಬಹಿರಂಗ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ತಾಲೂಕಿನ ಕುಂಟೋಜಿ, ಮೂಕಿಹಾಳ, ಕವಡಿಮಟ್ಟಿ, ಅಡವಿ ಸೋಮನಾಳ, ಹಡಲಗೇರಿ, ಹಿರೇಮುರಾಳ ಗ್ರಾಪಂ ವ್ಯಾಪ್ತಿಯ 40 ಹಳ್ಳಿಗಳಿಗೆ ಮುಖ್ಯ, ಉಪ ಮತ್ತು ಹೊಲಗಾಲುವೆ ನಿಮರ್ಿಸಲಾಗಿದೆ. ಈ ಪ್ರದೇಶಕ್ಕೆ ನೀರು ಹರಿಸದಿರುವುದರಿಂದ ಕಾಲುವೆಗಳು ಹಾಳಾಗುವ ಸಂಭವ ಇದೆ. ಬರಗಾಲವಿದ್ದರೂ ರೈತರ ಜಮೀನಿಗೆ ನೀರು ಹರಿಸದಿರುವುದು ನೋವುಂಟು ಮಾಡಿದೆ. ಈ ಪ್ರದೇಶಕ್ಕೂ ನೀರು ಹರಿಸಬೇಕು ಎಂದು ಐಸಿಸಿ ಸಭೆಯಲ್ಲಿ ಒತ್ತಾಯಿಸಲಾಗುತ್ತದೆ ಎಂದರು.
ಸಂತ್ರಸ್ತರಾದ ಅವಳಿ ಜಿಲ್ಲೆ ರೈತರಿಗೇ ನೀರಿಲ್ಲ. ಸಂತ್ರಸ್ತರಾಗದವರು ನೀರಾವರಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆಲಮಟ್ಟಿಯಲ್ಲಿ 123 ಟಿಎಂಸಿ ನೀರಿದ್ದರೂ ಕನಿಷ್ಠ 20-30 ಟಿಎಂಸಿ ನೀರನ್ನು ರೈತರಿಗೆ ಬಿಡಲಾಗೊಲ್ಲವೆ. ಬರಗಾಲದ ತೀವ್ರತೆ ಇದ್ದರೂ ಸಹಿತ ಆಲಮಟ್ಟಿ ಡ್ಯಾಂನಿಂದ ಅ.31ರವರೆಗೆ ಕೇವಲ 8 ಟಿಎಂಸಿ ನೀರನ್ನು ಮಾತ್ರ ಕಾಲುವೆ ಮೂಲಕ ಹರಿಸಲಾಗಿದೆ. ಇದು ನಮ್ಮ ರೈತರಿಗೆ ಮಾಡಿದ ಅನ್ಯಾಯ. ನಮ್ಮ ಭಾಗದ ಕಾಲುವೆಗೆ 16 ಟಿಎಂಸಿ ನೀರು ಹರಿಸುವ ಯೋಜನೆ ಇದೆ. ಇನ್ನುಳಿದ 8 ಟಿಎಂಸಿ ನೀರು ಎಲ್ಲಿ ಹೋಯಿತು ಎನ್ನುವುದನ್ನು ಸಕರ್ಾರ ಸ್ಪಷ್ಟಪಡಿಸಬೇಕು ಎಂದರು.
ನ.14ರಂದು ನೀರು ಹರಿಸುವಿಕೆ ಬಂದ್:
ನ.14ರಂದು ಆಲಮಟ್ಟಿ ಜಲಕಾಶಯದಿಂದ ಎಲ್ಲ ಕಾಲುವೆಗಳಲ್ಲಿ ನೀರು ಹರಿಸುವುದನ್ನು ಬಂದ್ ಮಾಡಲಾಗುತ್ತದೆ ಎಂದು ಕೆಬಿಜೆಎನ್ನೆಲ್ ಅಧಿಕಾರಿಗಳು ರೈತರಿಗೆ ತಿಳಿಸಿದ್ದಾರೆ ಎನ್ನುವ ವಿಷಯ ರೈತರನ್ನು ಚಿಂತೆಗೀಡು ಮಾಡಿದೆ. ಇದು ಅವಳಿ ಜಿಲ್ಲೆ ರೈತರಿಗೆ ಸಕರ್ಾರ ನಡೆಸುತ್ತಿರುವ ವ್ಯವಸ್ಥಿತ ಮೋಸ ಎನ್ನಿಸಿಕೊಂಡಿದೆ. ನಿಯಮದಂತೆ ಸಕರ್ಾರ ಕನಿಷ್ಠ ಒಂದು ಬೆಳೆಗಾದರೂ ಪೂತರ್ಿ ಆಗುವಷ್ಟು ನೀರು ಹರಿಸಬೇಕು. ಆಣೆಕಟ್ಟೆ ಪ್ರಾರಂಭಗೊಂಡಾಗಿನಿಂದಲೂ ಎರಡೂ ಜಿಲ್ಲೆಗಳ ಸಂತ್ರಸ್ತರ ರೈತರಿಗೆ ಅನ್ಯಾಯ ಆಗುತ್ತಿದೆ. ನ್ಯಾ.ಬ್ರಿಜೇಶ್ಕುಮಾರ ತೀಪರ್ಿನ ತಪ್ಪು ವ್ಯಾಖ್ಯಾನ ಮಾಡಲಾಗುತ್ತಿದೆ. ರೈತರ ಜಮೀನಿಗೆ ನೀರು ಹರಿಸುವಲ್ಲಿ ತಾರತಮ್ಯ ನಡೆಸಲಾಗುತ್ತದೆ ಎಂದು ಅವರು ಟೀಕಿಸಿದರು.
ಕೃಷ್ಣ ಕಾಡಾ ಮಾಜಿ ಅಧ್ಯಕ್ಷ, ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿ ಇದೀಗ ಆಲಮಟ್ಟಿ ನೀರಿನ ಮೇಲೆ ಅವಲಂಬಿತ ರೈತರ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಡ್ಯಾಂ ತುಂಬಿದರೂ ರೈತರಿಗೆ ಉಪಯೋಗ ಇಲ್ಲದಂತಾಗಿದೆ. ರೈತರ ವಿಷಯದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತೋರುತ್ತಿರುವ ಕಳಕಳಿಗೆ ನಮ್ಮ ಸ್ಪಂಧನೆ ಇದೆ. ಆಲಮಟ್ಟಿ ಡ್ಯಾಂನಿಂದ ಎರಡನೇ ಬೆಳೆಗೆ ನೀರು ಕೊಡದಿದ್ದರೆ ರೈತರು ತೀವ್ರ ಸಂಕಷ್ಟಕ್ಕೆ ಬಲಿಯಾಗಬೇಕಾಗುತ್ತದೆ. ಈ ವಿಷಯ ಇಟ್ಟುಕೊಂಡು ಶಾಸಕರು ನ.9ರಿಂದ ನಡೆಯಸುತ್ತಿರುವ ಪಾದಯಾತ್ರೆಗೆ ನಾವೆಲ್ಲ ಬೆಂಬಲ ನೀಡುತ್ತೇವೆ ಎಂದು ರೈತರ ಪರವಾಗಿ ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ನೂತನ ನಿದರ್ೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಪ್ರಮುಖರಾದ ಹೇಮರಡ್ಡಿ ಮೇಟಿ, ಎಂ.ಎಸ್.ಪಾಟೀಲ ನಾಲತವಾಡ, ಮಲಕೇಂದ್ರಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ಮಂಜುನಾಥಗೌಡ ಪಾಟೀಲ, ಎಸ್.ಎಚ್.ಲೊಟಗೇರಿ, ಮನೋಹರ ತುಪ್ಪದ, ಇಕ್ಬಾಲ್ ಮೂಲಿಮನಿ, ವಿನೋದ ವಾಲಿಕಾರ, ಮಲ್ಲು ಅಪರಾಧಿ, ಶರಣು ಬೂದಿಹಾಳಮಠ, ಗುಂಡಪ್ಪ ಹಣಮಗೌಡ್ರ, ಮಹಾಂತೇ ಗಂಜ್ಯಾಳ, ಕಾಶಿನಾಥ, ಬಿ.ಎಸ್.ಪಾಟೀಲ, ಸಂಗಣ್ಣ ಕೋಳುರ, ಸಿದ್ದನಗೌಡ ಪಾಟೀಲ, ಗುರು ಕೊಪ್ಪದ, ಹಣಮಂತ ರಾಠೋಡ, ಬಸವರಾಜ ನಾಯ್ಕೋಡಿ, ರಾಮನಗೌಡ ಪಾಟೀಲ, ಲಕ್ಷ್ಮಣ ಬಿಜ್ಜೂರ ಮತ್ತಿತರರು ಪಾಲ್ಗೊಂಡಿದ್ದರು.
ಪಾದಯಾತ್ರೆ ಮಾರ್ಗ:
ನ.9-ಬೆಳಿಗ್ಗೆ 10 ಮುದ್ದೇಬಿಹಾಳದ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ನಂತರ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ಸಭೆ. 11-30 ಗೆದ್ದಲಮರಿ, 12 ಚಲಮಿ ತಾಂಡಾ, 1-30 ಹುಲ್ಲೂರ ತಾಂಡಾ, 2-30 ಹುಲ್ಲೂರ, 3-30 ಕಾಳಗಿ, ಸಂಜೆ 4 ಬಳಬಟ್ಟಿ, 4.15 ವಡವಡಗಿ, 4-30 ಮಸೂತಿ, 5 ಯಲ್ಲಮ್ಮನ ಬೂದಿಹಾಳ, 5-30 ಕಾಶಿನಕುಂಟಿ, ಸಂಜೆ 6 ಯಲಗೂರದ ಆಂಜನೇಯ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆ ಹಾಗೂ ವಾಸ್ತವ್ಯ. ನ.10-ಬೆಳಿಗ್ಗೆ 9 ಯಲಗೂರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎರಡನೇ ದಿನದ ಯಾತ್ರೆಗೆ ಚಾಲನೆ. ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಆಲಮಟ್ಟಿಗೆ ಪ್ರಯಾಣ. ಬೆಳಿಗ್ಗೆ 10-30ಆಲಮಟ್ಟಿ ಡ್ಯಾಂಸೈಟ್ನಲ್ಲಿರುವ ಕೆಬಿಜೆಎನ್ನೆಲ್ ವ್ಯವಸ್ಥಾಪಕ ನಿದರ್ೇಶಕರ ಕಚೇರಿ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.