6ರಂದು ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಿಂದ ವಾಕ್‌ಥಾನ್

Walkathon from B.V.Bella Law College on the 6th

ಲೋಕದರ್ಶನ ವರದಿ 

6ರಂದು ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಿಂದ ವಾಕ್‌ಥಾನ್ 


ಬೆಳಗಾವಿ 03: ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯವು  ಸುವರ್ಣ ಮಹೋತ್ಸವ ಅಂಗವಾಗಿ ಹಳೆಯ ವಿದ್ಯಾರ್ಥಿ ಸಂಘಟನೆ ರವಿವಾರ 6ರಂದು ಮುಂಜಾನೆ 7  ಗಂಟೆಗೆ "ಅಲೂಮ್ನಿ ವಾಕಥಾನ್" (ಹಳೆಯ ವಿದ್ಯಾರ್ಥಿಗಳ ನಡೆಯುವ ಸ್ಪರ್ಧೆ) ಕಾರ್ಯಕ್ರಮವನ್ನು ಆಯೋಜಿಸಿದೆ. ಈ ವಾಕ್‌ಥಾನ್‌ಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಚಾಲನೆ ನೀಡಲಿದ್ದಾರೆ ಎಂದು ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜ್ಯೋತಿ ಹಿರೇಮಠ ಹೇಳಿದರು. 

ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.  


ಐತಿಹಾಸಿಕ ಕಾಲೇಜು: ಗುಣಮಟ್ಟದ ಕಾನೂನು ಶಿಕ್ಷಣವನ್ನು ನೀಡುವಲ್ಲಿ 50 ವರ್ಷಗಳ ಶ್ರೇಷ್ಠ ಸೇವೆಯನ್ನು ಪೂರೈಸಿದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ ಈ ಸುವರ್ಣ ಸಂಭ್ರಮಾಚರಣೆಯನ್ನು ನೆರವೇರಿಸಲು ಹಲವಾರು ವೈವಿಧ್ಯಪೂರ್ಣವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 1975ರಲ್ಲಿ ಸ್ಥಾಪನೆಯಾದ ಈ ಮಹಾವಿದ್ಯಾಲಯ, ಕೆ.ಎಲ್‌.ಇ. ಸಂಸ್ಥೆ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಮಹಾವಿದ್ಯಾಲಯವು 3 ವರ್ಷ ಹಾಗೂ 5 ವರ್ಷದ ಕಾನೂನು ಪದವಿ ಕೋರ್ಸುಗಳನ್ನು ನೀಡುತ್ತಿದೆ. ಲಿಂಗರಾಜ ಮಹಾವಿದ್ಯಾಲಯದ ವಿಶಾಲ ಆವರಣದಲ್ಲಿ ಇರುವ ಈ ಸಂಸ್ಥೆಯ ಉದ್ದೇಶ "ಸಮಾನತಾವಾದಿ ಸಮಾಜ ನಿರ್ಮಿಸಲು ಸಾಮಾಜಿಕ ಜವಾಬ್ದಾರಿಯನ್ನು ಸೃಷ್ಟಿಸುವ ಗುಣಮಟ್ಟದ ಕಾನೂನು ಶಿಕ್ಷಣವನ್ನು ನೀಡುವುದು" ಆಗಿದ್ದು, "ಕಾನೂನಿನ ಮೂಲಕ ನಾಗರಿಕರನ್ನು ಮಾನವೀಯಗೊಳಿಸುವುದು" ಮುಖ್ಯ ಧ್ಯೇಯವನ್ನು ಹೊಂದಿದೆ. 

ಆರಂಭದಲ್ಲಿ ಈ ಮಹಾವಿದ್ಯಾಲಯ "ಕೆ.ಎಲ್‌.ಇ. ಸಂಸ್ಥೆಯ ಸಂಜೆ ಕಾನೂನು ಮಹಾವಿದ್ಯಾಲಯ, ಬೆಳಗಾವಿ" ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿತ್ತು. 1982ರಲ್ಲಿ ಹಿರಿಯ ವಕೀಲ ಹಾಗೂ ಶಿಕ್ಷಣಾಸಕ್ತಿಯಾಗಿದ್ದ ಬಿ.ವಿ. ಬೆಲ್ಲದ ಅವರು ಶಿಕ್ಷಣ ಕ್ಷೇತ್ರದ ಬೆಳವಣಿಗೆಯಿಗಾಗಿ ಅಸಾಧಾರಣ ಶ್ರಮವಹಿಸಿ, ಈ ಮಹಾವಿದ್ಯಾಲಯದ ಸ್ಥಾಪನೆಗೆ ಒಂದು ಲಕ್ಷ ರೂಪಾಯಿಗಳನ್ನು ದಾನವಾಗಿ ನೀಡಿದರು. ಅವರ ಅಮೂಲ್ಯ ಸೇವೆಗೆ ಗೌರವ ಸೂಚಿಸಿ, ಕೆ.ಎಲ್‌.ಇ. ಸಂಸ್ಥೆಯು ಈ ಸಂಸ್ಥೆಗೆ "ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ" ಎಂಬ ಹೆಸರನ್ನು ಮಾಡಿ ಕೃತಜ್ಞತೆಯನ್ನು ಸಲ್ಲಿಸಿದೆ. 

ಈ ಮಹಾವಿದ್ಯಾಲಯವು 2009-10ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯಿಂದ ಶಾಶ್ವತ ಅಂಗೀಕಾರವನ್ನು ಪಡೆದುಕೊಂಡಿದೆ. ಯುಜಿಸಿ 2(ಜಿ) ಮತ್ತು 12(ಃ) ಅಡಿಯಲ್ಲಿ ಮಾನ್ಯತೆ ಹೊಂದಿದ್ದು, ಭಾರತದ ವಕೀಲರ ಪರಿಷತ್, ನವದೆಹಲಿಯಿಂದ ಅನುಮೋದಿತವಾಗಿದೆ. ಓಂಂಅ ನ ಮೂರನೇ ಮರು ಮೌಲ್ಯಮಾಪನದಲ್ಲಿ ಃ+ ಶ್ರೇಯಾಂಕವನ್ನು ಪಡೆದಿದೆ.  

  ಈ ಕಲಿತ ಅಸಂಖ್ಯ ವಿದ್ಯಾರ್ಥಿಗಳು ಸರ್ವೋಚ್ಛನ್ಯಾಯಾಲಯ ಹಾಗೂ ಉಚ್ಚನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಂತರಾಷ್ಟ್ರೀಯ ನೆಲೆಗಳಲ್ಲಿ ಸೇವೆಯ್ನನು ಸಲ್ಲಿಸುತ್ತಿದ್ದಾರೆ. ಕಾಲಕಾಲಕ್ಕೆ ಕಾಲೇಜು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಕಾನೂನು ವಿಶ್ವವಿದ್ಯಾಲಯಗಳ ಕಾಲೇಜುಗಳ ರಾ​‍್ಯಂಕಿಂಗನಲ್ಲಿ 25ನೇ ಶ್ರೇಯಾಂಕವನ್ನು ಪಡೆದಿದೆ. ಈ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಕಾನೂನು ವೃತ್ತಿ, ನ್ಯಾಯಾಂಗ ಮತ್ತು ಕಾರ​‍್ೊರೇಟ್ ಕ್ಷೇತ್ರದಲ್ಲಿ ಉತ್ತಮ ಹುದ್ದೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಕ್ರೀಡಾಕ್ಷೇತ್ರದಲ್ಲಿಯೂ ಅಸಾಧಾರಣವಾದ ಸಾಧನೆಯನ್ನು ಗೈದಿದೆ ಎಂದು ಹೇಳಿದರು.  

ಪ್ರೊ.ಸವಿತಾ ಪಟ್ಟಣಶೆಟ್ಟಿ, ದೈಹಿಕ ನಿರ್ದೇಶಕ ಡಾ.ರೀಚಾ ರಾವ್, ವಿದ್ಯಾರ್ಥಿ ಪ್ರತಿನಿಧಿ ಆಕಾಶ ಉಪಸ್ಥಿತರಿದ್ದರು.