6ರಂದು ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಿಂದ ವಾಕ್‌ಥಾನ್
Walkathon from B.V.Bella Law College on the 6th
ಲೋಕದರ್ಶನ ವರದಿ
6ರಂದು ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಿಂದ ವಾಕ್‌ಥಾನ್
ಬೆಳಗಾವಿ 03: ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯವು ಸುವರ್ಣ ಮಹೋತ್ಸವ ಅಂಗವಾಗಿ ಹಳೆಯ ವಿದ್ಯಾರ್ಥಿ ಸಂಘಟನೆ ರವಿವಾರ 6ರಂದು ಮುಂಜಾನೆ 7 ಗಂಟೆಗೆ "ಅಲೂಮ್ನಿ ವಾಕಥಾನ್" (ಹಳೆಯ ವಿದ್ಯಾರ್ಥಿಗಳ ನಡೆಯುವ ಸ್ಪರ್ಧೆ) ಕಾರ್ಯಕ್ರಮವನ್ನು ಆಯೋಜಿಸಿದೆ. ಈ ವಾಕ್‌ಥಾನ್‌ಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಚಾಲನೆ ನೀಡಲಿದ್ದಾರೆ ಎಂದು ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜ್ಯೋತಿ ಹಿರೇಮಠ ಹೇಳಿದರು.
ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಐತಿಹಾಸಿಕ ಕಾಲೇಜು: ಗುಣಮಟ್ಟದ ಕಾನೂನು ಶಿಕ್ಷಣವನ್ನು ನೀಡುವಲ್ಲಿ 50 ವರ್ಷಗಳ ಶ್ರೇಷ್ಠ ಸೇವೆಯನ್ನು ಪೂರೈಸಿದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ ಈ ಸುವರ್ಣ ಸಂಭ್ರಮಾಚರಣೆಯನ್ನು ನೆರವೇರಿಸಲು ಹಲವಾರು ವೈವಿಧ್ಯಪೂರ್ಣವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 1975ರಲ್ಲಿ ಸ್ಥಾಪನೆಯಾದ ಈ ಮಹಾವಿದ್ಯಾಲಯ, ಕೆ.ಎಲ್.ಇ. ಸಂಸ್ಥೆ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಮಹಾವಿದ್ಯಾಲಯವು 3 ವರ್ಷ ಹಾಗೂ 5 ವರ್ಷದ ಕಾನೂನು ಪದವಿ ಕೋರ್ಸುಗಳನ್ನು ನೀಡುತ್ತಿದೆ. ಲಿಂಗರಾಜ ಮಹಾವಿದ್ಯಾಲಯದ ವಿಶಾಲ ಆವರಣದಲ್ಲಿ ಇರುವ ಈ ಸಂಸ್ಥೆಯ ಉದ್ದೇಶ "ಸಮಾನತಾವಾದಿ ಸಮಾಜ ನಿರ್ಮಿಸಲು ಸಾಮಾಜಿಕ ಜವಾಬ್ದಾರಿಯನ್ನು ಸೃಷ್ಟಿಸುವ ಗುಣಮಟ್ಟದ ಕಾನೂನು ಶಿಕ್ಷಣವನ್ನು ನೀಡುವುದು" ಆಗಿದ್ದು, "ಕಾನೂನಿನ ಮೂಲಕ ನಾಗರಿಕರನ್ನು ಮಾನವೀಯಗೊಳಿಸುವುದು" ಮುಖ್ಯ ಧ್ಯೇಯವನ್ನು ಹೊಂದಿದೆ.
ಆರಂಭದಲ್ಲಿ ಈ ಮಹಾವಿದ್ಯಾಲಯ "ಕೆ.ಎಲ್.ಇ. ಸಂಸ್ಥೆಯ ಸಂಜೆ ಕಾನೂನು ಮಹಾವಿದ್ಯಾಲಯ, ಬೆಳಗಾವಿ" ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿತ್ತು. 1982ರಲ್ಲಿ ಹಿರಿಯ ವಕೀಲ ಹಾಗೂ ಶಿಕ್ಷಣಾಸಕ್ತಿಯಾಗಿದ್ದ ಬಿ.ವಿ. ಬೆಲ್ಲದ ಅವರು ಶಿಕ್ಷಣ ಕ್ಷೇತ್ರದ ಬೆಳವಣಿಗೆಯಿಗಾಗಿ ಅಸಾಧಾರಣ ಶ್ರಮವಹಿಸಿ, ಈ ಮಹಾವಿದ್ಯಾಲಯದ ಸ್ಥಾಪನೆಗೆ ಒಂದು ಲಕ್ಷ ರೂಪಾಯಿಗಳನ್ನು ದಾನವಾಗಿ ನೀಡಿದರು. ಅವರ ಅಮೂಲ್ಯ ಸೇವೆಗೆ ಗೌರವ ಸೂಚಿಸಿ, ಕೆ.ಎಲ್.ಇ. ಸಂಸ್ಥೆಯು ಈ ಸಂಸ್ಥೆಗೆ "ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ" ಎಂಬ ಹೆಸರನ್ನು ಮಾಡಿ ಕೃತಜ್ಞತೆಯನ್ನು ಸಲ್ಲಿಸಿದೆ.
ಈ ಮಹಾವಿದ್ಯಾಲಯವು 2009-10ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯಿಂದ ಶಾಶ್ವತ ಅಂಗೀಕಾರವನ್ನು ಪಡೆದುಕೊಂಡಿದೆ. ಯುಜಿಸಿ 2(ಜಿ) ಮತ್ತು 12(ಃ) ಅಡಿಯಲ್ಲಿ ಮಾನ್ಯತೆ ಹೊಂದಿದ್ದು, ಭಾರತದ ವಕೀಲರ ಪರಿಷತ್, ನವದೆಹಲಿಯಿಂದ ಅನುಮೋದಿತವಾಗಿದೆ. ಓಂಂಅ ನ ಮೂರನೇ ಮರು ಮೌಲ್ಯಮಾಪನದಲ್ಲಿ ಃ+ ಶ್ರೇಯಾಂಕವನ್ನು ಪಡೆದಿದೆ.
ಈ ಕಲಿತ ಅಸಂಖ್ಯ ವಿದ್ಯಾರ್ಥಿಗಳು ಸರ್ವೋಚ್ಛನ್ಯಾಯಾಲಯ ಹಾಗೂ ಉಚ್ಚನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಂತರಾಷ್ಟ್ರೀಯ ನೆಲೆಗಳಲ್ಲಿ ಸೇವೆಯ್ನನು ಸಲ್ಲಿಸುತ್ತಿದ್ದಾರೆ. ಕಾಲಕಾಲಕ್ಕೆ ಕಾಲೇಜು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಕಾನೂನು ವಿಶ್ವವಿದ್ಯಾಲಯಗಳ ಕಾಲೇಜುಗಳ ರಾ್ಯಂಕಿಂಗನಲ್ಲಿ 25ನೇ ಶ್ರೇಯಾಂಕವನ್ನು ಪಡೆದಿದೆ. ಈ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಕಾನೂನು ವೃತ್ತಿ, ನ್ಯಾಯಾಂಗ ಮತ್ತು ಕಾರ್ೊರೇಟ್ ಕ್ಷೇತ್ರದಲ್ಲಿ ಉತ್ತಮ ಹುದ್ದೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಕ್ರೀಡಾಕ್ಷೇತ್ರದಲ್ಲಿಯೂ ಅಸಾಧಾರಣವಾದ ಸಾಧನೆಯನ್ನು ಗೈದಿದೆ ಎಂದು ಹೇಳಿದರು.
ಪ್ರೊ.ಸವಿತಾ ಪಟ್ಟಣಶೆಟ್ಟಿ, ದೈಹಿಕ ನಿರ್ದೇಶಕ ಡಾ.ರೀಚಾ ರಾವ್, ವಿದ್ಯಾರ್ಥಿ ಪ್ರತಿನಿಧಿ ಆಕಾಶ ಉಪಸ್ಥಿತರಿದ್ದರು.
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು 