ನಗರದಲ್ಲಿ ಡಿ.15 ರಂದು ವಾಕ್‌ಥಾನ್ ಸ್ಪರ್ಧೆ

Walkathon competition on December 15 in the city

ಕಾರವಾರ 12: ಕಾರವಾರ ರೋಟರಿ ಕ್ಲಬ್ ಪಶ್ಚಿಮದ ವತಿಯಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ನಗರದಲ್ಲಿ ಡಿ.15 ರಂದು ವಾಕ್‌ಥಾನ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಾರವಾರ ರೋಟರಿ ಕ್ಲಬ್ ವೆಸ್ಟ ಅಧ್ಯಕ್ಷ ಲಕ್ಷ್ಮಿಕಾಂತ ತೆಂಡೂಲ್ಕರ್ ತಿಳಿಸಿದರು. 

ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಮಾಲಾದೇವಿ ಮೈದಾನದಲ್ಲಿ ಡಿ.15 ರಂದು ಮುಂಜಾನೆ 6.30ಕ್ಕೆ ವಾಕ್‌ಥಾನ್‌ಗೆ ಚಾಲನೆ ಸಿಗಲಿದೆ. ಸ್ಪರ್ಧೆಯಲ್ಲಿ 15 ವರ್ಷದೊಳಗಿನ ಹಾಗೂ 16 ವರ್ಷ ಮೇಲ್ಟಟ್ಟ ಗಂಡು ಹಾಗೂ ಹೆಣ್ಣು ಮಕ್ಕಳು ಭಾಗವಹಿಸಬಹುದಾಗಿದೆ. 15 ವರ್ಷದೊಳಗಿನ ಹಾಗೂ 55 ವರ್ಷ ಮೇಲ್ಟಟ್ಟವರಿಗೆ 5 ಕಿ.ಮೀ ವಾಕಥಾನ್ ಸ್ಪರ್ಧೆ, 16-34 ವರ್ಷದವರಿಗೆ ಹಾಗೂ 35-54 ವರ್ಷದವರಿಗೆ 10 ಕಿ,ಮೀ ವಾತಥಾನ್ ಇರಲಿದೆ. ಎಲ್ಲ ವಿಭಾಗದಲ್ಲಿಯೂ ಮೊದಲ ಸ್ಥಾನ ಪಡೆದವರಿಗೆ 6 ಹಾಗೂ ಎರಡನೇ ಸ್ಥಾನ ಪಡೆದವರಿಗೆ 3 ಸಾವಿರ ಬಹುಮಾನ ಜೊತೆಗೆ ಟ್ರೋಪಿ ನೀಡಲಾಗುವುದು. ಅಲ್ಲದೆ ಭಾಗವಹಿಸಿದ ಎಲ್ಲರಿಗೂ ಟೀಸರ್ಟ್‌, ಕ್ಯಾಪ್, ಪ್ರಮಾಣಪತ್ರ ಮತ್ತು ಲಘು ಉಪಹಾರದ ವ್ಯವಸ್ಥೆ ಇರಲಿದೆ ಎಂದರು.ಇನ್ನು ಈ ಮ್ಯಾರಥಾನ್‌ಗೆ ರೋಟರಿ ಕ್ಲಬ್‌ನ ರಾಜ್ಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಚಾಲನೆ ನೀಡಲಿದ್ದಾರೆ.  

ನಗರಸಭೆ ಅಧ್ಯಕ್ಷ ರವೀರಾಜ ಅಂಕೋಲೇಕರ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ವಾಕಥಾನ್ ಸ್ಫರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಈಗಾಗಲೇ ನೋಂದಣಿ ಪ್ರಾರಂಭವಾಗಿದೆ. ಭಾಗವಹಿಸುವವರು 9986473797 ಅಥವಾ 9096653602 ಸಂಪರ್ಕಿಸಬಹುದಾಗಿದೆ ಎಂದರು.ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಅರವಿಂದ ನಾಯಕ ಮಾತನಾಡಿ ಪ್ರತಿ ವರ್ಷವೂ ನಡೆಸುತ್ತಿರುವ ವಾಕಥಾನ್ ಸ್ಪರ್ಧೆ ಬಳಿಕ ಉಳಿದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತಿದೆ. ಕಳೆದ ಬಾರಿಯೂ ಕೂಡ ಹಲವು ಶಾಲೆಗಳಿಗೆ ಬ್ಯಾಗ್ ಹಾಗೂ ವಿಶೇಷ ಚೇತನ ಮಕ್ಕಳಿರುವ ಶಾಲೆಗೆ ಹಣಕಾಸಿನ ಸಹಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.  

ಈ ವೇಳೆ ರೋ. ಜಯದೀಪ್ ಪಾಟೀಲ್, ಸಂದೀಪ್, ಪ್ರೀತಮ್ ವೆರ್ಣೇಕರ್, ಪ್ರಸಾದ್ ಮಹಾಜನ್, ರಾಜೇಶ ಶೆಣೈ, ರತ್ನಾಕರ್, ಹೇಮಲಾ, ಪಲ್ಲವಿ ಡಿಸೋಜಾ, ರಮೇಶ ತನ್ನಾ ಸೇರಿದಂತೆ ಇನ್ನಿತರರು ಇದ್ದರು.