ಯುಎಸ್ ಓಪನ್ ಚಾಂಪಿಯನ್ ಬಿಯಾಂಕಗೆ ಡಬ್ಲ್ಯುಡಬ್ಲ್ಯುಇ ಬೆಲ್ಟ್

ನವದೆಹಲಿ, ಸೆ 14    ಚೊಚ್ಚಲ ಯುಎಸ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿರುವ ಕೆನಡಾದ ಬಿಯಾಂಕ ಆ್ಯಂಡ್ರಿಸ್ಕು ಅವರಿಗೆ ವಿಶ್ವ ಕುಸ್ತಿ ಚಾಂಪಿಯನ್ಶಿಪ್ (ಡಬ್ಲ್ಯುಡಬ್ಲ್ಯುಇ)ನ ಬೆಲ್ಟ್ ನೀಡಿ ಗೌರವಿಸಿದೆ.    19ರ ಪ್ರಾಯದ ಬಿಯಾಂಕ 23 ಬಾರಿ ಗ್ರ್ಯಾನ್ ಸ್ಲ್ಯಾಮ್ ವಿಜೇತೆ ಸೆರೇನಾ ವಿಲಿಯಮ್ಸ್ ಅವರನ್ನು ಮಣಿಸಿ ಚೊಚ್ಚಲ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಶುಕ್ರವಾರ ಆ್ಯಂಡ್ರಿಸ್ಕು ಬೆಲ್ಟ್ ಜತೆಗಿನ ಫೋಟೊವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದರು. " ಬೆಲ್ಟ್ ನೀಡಿದ್ದಕ್ಕೆ ಡಬ್ಲ್ಯುಡಬ್ಲ್ಯುಇಗೆ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದರು.  ಯುಎಸ್ ಚಾಂಪಿಯನ್ 19ರ ತರುಣಿಯ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಟ್ರಿಬಲ್ ಎಚ್ ಅವರು, ಡಬ್ಲ್ಯುಡಬ್ಲ್ಯುಇಗೆ ನಿಮಗೆ ಸದಾ ಸ್ವಾಗತ ಆದರೆ, ಆ ಶೀರ್ಷಿಕೆಗೆ ನೀವು ಚಾಲೆಂಜರ್ ಆಗಿರಬಹುದು.  ಮತ್ತೆ ಅಭಿನಂದನೆಗಳು! ಎಂದಿದ್ದಾರೆ. ಬಿಯಾಂಕಗೆ ನೀಡಿರುವ ಡಬ್ಲ್ಯುಡಬ್ಲ್ಯುಇ ಬೆಲ್ಟ್ನಲ್ಲಿ ಆ್ಯಂಡ್ರಿಸ್ಕು ಅವರ ಪೂರ್ಣ ಹೆಸರು ಹಾಗೂ ಯುಎಸ್ ಓಪನ್ ಲೋಗೋ ಒಳಗೊಂಡಿದೆ.  ಸೆ.8 ರಂದು ನ್ಯೂಯಾರ್ಕ್ನ್ ಅರ್ಥರ್ ಅಂಗಳದಲ್ಲಿ ನಡೆದಿದ್ದ ಯುಎಸ್ ಓಪನ್ ಫೈನಲ್ನಲ್ಲಿ ಸೆರೇನಾ ವಿಲಿಯನ್ಸ್ ಅವರನ್ನು 6-3, 7-5 ಅಂತರದಲ್ಲಿ ಮಣಿಸಿ ಯುಎಸ್ ಕಿರೀಟ ಗೆದ್ದ ಕೆನಡಾದ ಮೊದಲ ಟೆನಿಸ್ ಆಟಗಾತರ್ಿ ಎಂಬ ಸಾಧನೆಗೆ ಬಿಯಾಂಕ ಭಾಜನರಾಗಿದ್ದಾರೆ. ಬಿಯಾಂಕ್ ಯುಎಸ್ ಚಾಂಪಿಯನ್ ಆದ ಬಳಿಕ ಟ್ರಿಬಲ್ ಎಚ್ ಅಬಿನಂದನೆ ಸಲ್ಲಿಸಿದ್ದರು.