ಬೈಲಹೊಂಗಲ 26: ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಮದುವೆ ಸಮಾರಂಭದಲ್ಲಿ ಪುರಸಭೆಯ ಮತದಾನ ಜಾಗೃತಿ ಸಮೀತಿ ವತಿಯಿಂದ ಮತದಾನ ಜಾಗೃತಿ ಜರುಗಿತು.
ಮತದಾನದ ಬಗ್ಗೆ ವಿನೂತನವಾಗಿ ಸಾರ್ವಜನಿಕರಲ್ಲಿ ತಿಳಿಹೇಳಿ ಮತದಾನದ ಕುರಿತಾದ ನಕಾರಾತ್ಮಕ ಮನೋಭಾವ ತೊರೆದು ಪ್ರತಿಯೊಬ್ಬರು ಮತದಾನದ ಪ್ರಕಿಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಮುಖ್ಯಾಧಿಕಾರಿ ಎಸ್.ಜಿ.ಅಂಬಿಗೇರ, ಸಿಬ್ಬಂದಿ ಈಶ್ವರ ಸಿದ್ನಾಳ, ಆರ್.ಎಸ್.ಹಿಟ್ಟಣಗಿ, ಸತೀಶ ಕಜ್ಜಿಡೋನಿ, ಎ.ಎಮ್.ಮಾಜಿಕೋತವಾಲ, ಜಿ.ಆರ್.ಪತ್ತಾರ, ಸಂಜಯ ಹಂಚಿನಮನಿ, ಅಣಾಸಾಹೇಬ ಹೆಗ್ಗಡೆ, ಸುರೇಶ ಪಾಟೀಲ, ಯು.ಸಿ.ಬೇಟಗೇರಿ, ಡಿ.ಎಫ್.ಖಲೀಫ್, ಅಶೋಕ ಪಾಗಾದ, ಬಿ.ಆಯ್.ಗುಡಿಮನಿ, ಎಸ್.ಕೆ.ಬಬುನಾಳೆ ಮುಂತಾದವರು ಇದ್ದರು.