ಮತದಾರರ ಪಟ್ಟಿ ಪರಿಶೀಲನೆ ಕಾರ್ಯ: ಜಿಲ್ಲಾಧಿಕಾರಿಗಳ ಭೇಟಿ

ಗದಗ : ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಂದು ಶಿರಹಟ್ಟಿ, ಹಾಗೂ ಲಕ್ಷ್ಮೇಶ್ವರ ತಹಶೀಲ್ದಾರ ಕಚೇರಿಗಳಿಗೆ ಭೇಟಿ ನೀಡಿ ನೆರೆ ಪರಿಹಾರ ಕಾರ್ಯ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳ ಕುರಿತು ಪರಿಶೀಲಿಸಿ ಗೊಜನೂರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಶಿರಹಟ್ಟಿ ತಹಶೀಲ್ದಾರ ಯಲ್ಲಪ್ಪ ಗೋನೆನ್ನವರ, ಲಕ್ಷ್ಮೇಶ್ವರ ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟರ ಸಿಬ್ಬಂದಿಗಳು ಉಪಸ್ಥಿತರಿದ್ದರು.