ಕಲಕೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ-ಶ್ರೀನಿವಾಸ

Visit to primary health center of Kalakeri village - Srinivas

ಕಲಕೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ-ಶ್ರೀನಿವಾಸ 

ಹಾನಗಲ್ 17 : ತಾಲೂಕಿನ ಕಲಕೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಸಂಜೆ ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿ, ಸೌಲಭ್ಯಗಳ ಪರೀಶೀಲನೆ ನಡೆಸಿದರು. 

  ಹೆರಿಗೆ ವಾರ್ಡ್‌,ಜನರಲ್ ವಾರ್ಡ್‌, ಹೊರ ರೋಗಿಗಳ ವಿಭಾಗ, ಓಷಧಾಲಯ ಹೀಗೆ ಪ್ರತಿಯೊಂದು ವಿಭಾಗಗಳಿಗೂ ಭೇಟಿ ನೀಡಿ, ಮಾಹಿತಿ ಪಡೆದರು. ಕೇಂದ್ರದ ವ್ಯಾಪ್ತಿಗೆ 17 ಗ್ರಾಮಗಳು ಒಳಪಡಲಿದ್ದು, ನಿತ್ಯವೂ 150 ಕ್ಕೂ ಹೆಚ್ಚು ಜನರಿಗೆ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ತಿಂಗಳು ಕನಿಷ್ಟ ಆರೇಳು ಹೆರಿಗೆ ಮಾಡಲಾಗುತ್ತಿದೆ. ಓಷಧದ ಕೊರತೆ ಇಲ್ಲ ಎಂದು ವೈದ್ಯಾಧಿಕಾರಿ ಡಾ.ವೆನಿಲಾ ಮಾಹಿತಿ ನೀಡಿದರು.  24ಥ7 ಮಾದರಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ನೀಡಬೇಕು. ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು. ಕೇಂದ್ರಕ್ಕೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ಮಾತನಾಡಿ. ಲಭ್ಯವಿರುವ ಸೇವೆಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಚಿಕಿತ್ಸೆ ನೀಡುವಂತೆ ಶಾಸಕ ಮಾನೆ ಸೂಚಿಸಿದರು.  ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದಾಗ ಸ್ಪಂದಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸಹಕಾರ ನೀಡುವಂತೆ ಶ್ರೀನಿವಾಸ ಮಾನೆ ಮನವಿ ಮಾಡಿದರು.