ಅಧಿಕಾರಿಗಳಿಂದ ಮತಗಟ್ಟೆಗಳಿಗೆ ಭೇಟಿ

ಲೋಕದರ್ಶನ ವರದಿ

ಸಂಬರಗಿ 02: ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಸೂಕ್ಷ್ಮ-ಅತಿಸೂಕ್ಷ್ಮ ಹಾಗೂ ಕ್ಲಿಷ್ಟಕರ ಮತಗಟ್ಟೆಗೆ ಗುಜರಾತ ರಾಜ್ಯದ ಗೃಹ ಇಲಾಖೆಯ ಅಧಿಕಾರಿಗಳು ಹಾಗೂ ಕಾಗವಾಡ ಕ್ಷೇತ್ರದ ಸಾಮಾನ್ಯ ವೀಕ್ಷಕರು (ಜೆನರಲ್ ಆಬ್ಸರ್ವರ್) ಸುನೀಲಕುಮಾರ ಡೊಳ್ಳಿ ಹಲವಾರು ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಹಲವಾರು ಸೂಚನೆ ನೀಡಿದರು. 

ವಿಷ್ಣುವಾಡಿ, ಜಕಾರಟ್ಟಿ, ಅರಳಿಹಟ್ಟಿ, ಜಂಬಗಿ, ಸಂಬರಗಿ, ಶಿರೂರ, ಖಿಳೇಗಾಂವ, ಆಜೂರ, ಚಂದ್ರಪ್ಪವಾಡಿ, ಅನಂತಪೂರ, ಮಲಾಬಾದ ಸೇರಿದಂತೆ ಕ್ಲಿಷ್ಟಕರ ಮತಕೇಂದ್ರಗಳಿಗೆ ಭೇಟಿ ನೀಡಿ ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿರ್ಲಕ್ಷವಹಿಸಿದರೆ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದರು. ಆ ಮತಕೇಂದ್ರದ ಸೆಕ್ಟರ್ ಅಧಿಕಾರಿಗಳ ಜೊತೆ ಮತಕೇಂದ್ರಕ್ಕೆ ಭೇಟಿ ನೀಡಿ ಸೆಕ್ಟರ್ ಆಫಿಸರ್ಗಳಿಗೆ ಸೂಚನೆ ನೀಡಿದರು. ಅಲ್ಲಿ ಯಾವುದೇ ಸಮಸ್ಯೆ ಬರಬಾರದೆಂದು ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ಈ ವೇಳೆ ಕಂದಾಯ ನಿರೀಕ್ಷಕರಾದ ಮುಬಾರಕ ಮುಜಾವರ, ಗ್ರಾಮ ಲೆಕ್ಕಾಧಿಕಾರಿ ಗೋಪಾಲ ಜಾಧವ, ಎ.ಎ.ಪಾಟೀಲ, ವಿ.ಆರ್.ರಾಠೋಡ ಸೇರಿದಂತೆ ಆ ಗ್ರಾಮದ ಸೆಕ್ಟರ್ ಅಧಿಕಾರಿಗಳು ಹಾಜರಿದ್ದರು.